alex Certify ವಿದೇಶಿ ಮಹಿಳೆಯರಂತೆ ಯಾವಾಗ ಬೇಕಾದ್ರೂ ಬಾಯ್ ಫ್ರೆಂಡ್ ಬದಲಿಸುವ ನಿತೀಶ್ ಕುಮಾರ್: ವಿವಾದಿತ ಹೇಳಿಕೆ ನೀಡಿದ ಬಿಜೆಪಿ ನಾಯಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದೇಶಿ ಮಹಿಳೆಯರಂತೆ ಯಾವಾಗ ಬೇಕಾದ್ರೂ ಬಾಯ್ ಫ್ರೆಂಡ್ ಬದಲಿಸುವ ನಿತೀಶ್ ಕುಮಾರ್: ವಿವಾದಿತ ಹೇಳಿಕೆ ನೀಡಿದ ಬಿಜೆಪಿ ನಾಯಕ

ಇಂದೋರ್: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು “ವಿದೇಶಿ ಮಹಿಳೆಯರಿಗೆ” ಹೋಲಿಸಿ ಅವರ ವಿರುದ್ಧ ಟೀಕೆ ಮಾಡುವ ಮೂಲಕ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯ ಅವರು ವಿವಾದ ಹುಟ್ಟುಹಾಕಿದ್ದಾರೆ.

ನಾನು ವಿದೇಶ ಪ್ರವಾಸದಲ್ಲಿದ್ದಾಗ, ಅಲ್ಲಿನ ಮಹಿಳೆಯರು ಯಾವಾಗ ಬೇಕಾದರೂ ತಮ್ಮ ಬಾಯ್‌ ಫ್ರೆಂಡ್‌ ಗಳನ್ನು ಬದಲಾಯಿಸಿಕೊಳ್ಳುತ್ತಾರೆ ಎಂದು ಅಲ್ಲಿದ್ದವರೊಬ್ಬರು ಹೇಳಿದ್ದರು. ಬಿಹಾರ ಮುಖ್ಯಮಂತ್ರಿ ಕೂಡ ಹಾಗೆ. ಯಾರ ಕೈ ಹಿಡಿಯುತ್ತಾರೆ ಅಥವಾ ಬಿಡುತ್ತಾರೆ ಎಂದು ಅವರಿಗೆ ತಿಳಿದಿಲ್ಲ ಎಂದು ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.

ಕಳೆದ ವಾರ ಅಚ್ಚರಿಯ ನಡೆಯಲ್ಲಿ ನಿತೀಶ್ ಕುಮಾರ್ ಅವರು ಬಿಜೆಪಿ ಜೊತೆಗಿನ ಸಮ್ಮಿಶ್ರ ಆಡಳಿತ ತೊರೆದಿದ್ದರು. ಬಿಜೆಪಿಯೊಂದಿಗಿನ ಭಿನ್ನಾಭಿಪ್ರಾಯಗಳು ಉತ್ತುಂಗಕ್ಕೇರುತ್ತಿದ್ದಂತೆ ಅವರು 2017 ರಲ್ಲಿ ಅವರು ತೊರೆದಿದ್ದ ಮಹಾಘಟಬಂಧನ್‌ ಗೆ ಮರಳಿದರು. 243 ಸದಸ್ಯ ಬಲದ ವಿಧಾನಸಭೆಯಲ್ಲಿ ಜೆಡಿಯು ಒಟ್ಟು 43 ಸ್ಥಾನಗಳನ್ನು ಹೊಂದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...