ಪಾಟ್ನಾ: ಬಿಹಾರದಲ್ಲಿ ಜೆಡಿಯು, ಆರ್.ಜೆ.ಡಿ. ನೇತೃತ್ವದ ಮಹಾಘಟಬಂದನ್ ಮೈತ್ರಿಕೂಟ ಸರ್ಕಾರ ರಚನೆಯಾಗುವುದು ನಿಶ್ಚಿತವಾಗಿದೆ.
ಪಾಟ್ನಾದಲ್ಲಿ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಮಾತನಾಡಿ, ಬಿಹಾರದಲ್ಲಿ ಜೆಡಿಯು –ಆರ್.ಜೆ.ಡಿ. ಸರ್ಕಾರ ರಚನೆಗೆ ತೀರ್ಮಾನಿಸಲಾಗಿದ್ದು, ನನಗೆ ಎಲ್ಲಾ ಶಾಸಕರು ಬೆಂಬಲ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಹೊಸ ಸರ್ಕಾರ ರಚನೆಗೆ ಅವಕಾಶ ನೀಡುವಂತೆ ರಾಜ್ಯಪಾಲ ಫಾಗು ಚೌಹಾಣ್ ಅವರಿಗೆ ಮನವಿ ಮಾಡಿದ್ದೇವೆ. 164 ಶಾಸಕರ ಬೆಂಬಲದ ಸಹಿ ಇರುವ ಪತ್ರವನ್ನು ನೀಡಿದ್ದೇವೆ. ನಮ್ಮದು 7 ಪಕ್ಷಗಳ ಮಹಾಘಟಬಂಧನ್ ಆಗಿದೆ ಎಂದು ರಾಜ್ಯಪಾಲರ ಭೇಟಿ ಬಳಿಕ ನಿತೀಶ್ ಕುಮಾರ್ ಮಾಹಿತಿ ನೀಡಿದ್ದಾರೆ.