
ನಟ ನಿರೂಪ್ ಭಂಡಾರಿ ಅವರ ಮುಂಬರುವ ಚಿತ್ರದ ಟೈಟಲ್ ಹಾಗೂ ಪೋಸ್ಟರ್ ಅನ್ನು ಬಿಡುಗಡೆಗೊಳಿಸಲಾಗಿದೆ. ‘ಸತ್ಯ ಸನ್ ಆಫ್ ಹರಿಶ್ಚಂದ್ರ’ ಎಂಬ ಟೈಟಲ್ ಇಡಲಾಗಿದ್ದು, ಇದೊಂದು ತಂದೆ – ಮಗನ ಕುರಿತ ಕಥೆ ಎಂದು ಹೇಳಲಾಗಿದೆ. ನಟ ನಿರೂಪ್ ಭಂಡಾರಿ ಈ ಪೋಸ್ಟರ್ ಅನ್ನು ತಮ್ಮ instagram ನಲ್ಲಿ ಅಪ್ಲೋಡ್ ಮಾಡಿದ್ದಾರೆ.
ನಿರೂಪ್ ಭಂಡಾರಿ ತಂದೆಯ ಪಾತ್ರದಲ್ಲಿ ಖ್ಯಾತ ನಟ ಸಾಯಿ ಕುಮಾರ್ ಅಭಿನಯಿಸುತ್ತಿದ್ದು, ಬೃಂದಾ ಆಚಾರ್ಯ, ಅಶ್ವಿನ್ ಹಾಸನ್, ಅಂಕಿತ ಅಮರ್, ಅರ್ಜುನ್ ಪಾಳೆಗಾರ್, ಚೇತನ್ ದುರ್ಗಾ ಸೇರಿದಂತೆ ಮೊದಲಾದ ಕಲಾವಿದರು ತೆರೆ ಹಂಚಿಕೊಂಡಿದ್ದಾರೆ. ಅಂಕಿತ್ ನಿರ್ಮಾಣ ಮಾಡುತ್ತಿದ್ದು, ಪ್ರಶಾಂತ್ ಸಹ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಸಚಿನ್ ಬಸ್ರೂರ್ ಸಂಗೀತ ಸಂಯೋಜನೆ ನೀಡುತ್ತಿದ್ದು, ಉಜ್ವಲ್ ಚಂದ್ರ ಸಂಕಲನ ಹಾಗೂ ಸಂದೀಪ್ ವಲ್ಲೂರಿ ಛಾಯಾಗ್ರಹಣವಿದೆ.
