alex Certify ರಾಜ್ಯ ರಾಜಧಾನಿ ಬೆಂಗಳೂರು ಮುಡಿಗೆ ಮತ್ತೊಂದು ಗರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯ ರಾಜಧಾನಿ ಬೆಂಗಳೂರು ಮುಡಿಗೆ ಮತ್ತೊಂದು ಗರಿ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್​ 2021ನೇ ಸಾಲಿನ ಎನ್​ಐಆರ್​ಎಫ್​​​ ರ್ಯಾಂಕಿಂಗ್​​ ಬಿಡುಗಡೆ ಮಾಡಿದ್ದಾರೆ. ಮದ್ರಾಸ್​ನ ಇಂಡಿಯನ್​ ಇನ್​ಸ್ಟಿಟ್ಯೂಟ್​ ಆಫ್​ ಟೆಕ್ನಾಲಜಿ ಒಟ್ಟಾರೆ ವಿಭಾಗದಲ್ಲಿ ಮೊದಲ ಸ್ಥಾನವನ್ನು ಉಳಿಸಿಕೊಂಡಿದೆ. ನಂತರದ ಸ್ಥಾನವನ್ನು ಬೆಂಗಳೂರಿನ ಪ್ರತಿಷ್ಠಿತ ಇಂಡಿಯನ್​ ಇನ್​ಸ್ಟಿಟ್ಯೂಟ್​ ಆಫ್​ ಸೈನ್ಸ್​ ಪಡೆದುಕೊಂಡಿದೆ.

ಒಟ್ಟಾರೆ ವಿಭಾಗ, ವಿಶ್ವವಿದ್ಯಾಲಯ, ಆಡಳಿತ ವಿಭಾಗ, ಕಾಲೇಜು, ಫಾರ್ಮಸಿ, ವೈದ್ಯಕೀಯ, ಇಂಜಿನಿಯರಿಂಗ್​, ಆರ್ಕಿಟೆಕ್ಚರ್​, ಕಾನೂನು ಹಾಗೂ ಸಂಶೋಧನಾ ಸಂಸ್ಥೆ ಸೇರಿದಂತೆ ಒಟ್ಟು 11 ವಿಭಾಗಗಳನ್ನು ಆಧರಿಸಿ ಶ್ರೇಯಾಂಕ ಬಿಡುಗಡೆ ಮಾಡಲಾಗಿದೆ. ಈ ಬಾರಿ ಸಂಶೋಧನಾ ಸಂಸ್ಥೆಗಳನ್ನೂ ಈ ವಿಭಾಗಕ್ಕೆ ಸೇರ್ಪಡೆ ಮಾಡಲಾಗಿದೆ.

ಎನ್​ಐಆರ್​ಎಫ್​ ಶ್ರೇಯಾಂಕವು ಈ ವಿಭಾಗಗಳನ್ನು ಆಧರಿಸಿದೆ – ಬೋಧನೆ, ಕಲಿಕೆ ಹಾಗೂ ಸಂಪನ್ಮೂಲ, ಸಂಶೋಧನೆ ಹಾಗೂ ವೃತ್ತಿಪರ ಅಭ್ಯಾಸ, ಪದವಿ ಫಲಿತಾಂಶಗಳು, ಔಟ್​ ರೀಚ್​ ಹಾಗೂ ಇನ್​ಕ್ಲೂಸಿವಿಟಿ ಸೇರಿದಂತೆ ವಿವಿಧ ವಿಭಾಗಗಳನ್ನು ಆಧರಿಸಿದೆ. ಎನ್​ಐಆರ್​ಎಫ್​ ಶ್ರೇಯಾಂಕಕ್ಕೆ ನೋಂದಾಯಿಸಲ್ಪಟ್ಟ ಭಾರತೀಯ ಸಂಸ್ಥೆಗಳ ಸಂಖ್ಯೆ ಕೂಡ ಹೆಚ್ಚಾಗಿದೆ. 2019ಕ್ಕೆ ಹೋಲಿಸಿದ್ರೆ 2020ರಲ್ಲಿ ಹೆಚ್ಚು ಅಂದರೆ ಒಟ್ಟು 3800 ಸಂಸ್ಥೆಗಳು ಭಾಗಿಯಾಗಿದ್ದವು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...