2012ರ ನಿರ್ಭಯಾ ಸಾಮೂಹಿಕ ಅತ್ಯಚಾರ ಹಾಗೂ ಕೊಲೆ ಪ್ರಕರಣ ನೆನಪಿಸುವ ಘಟನೆಯೊಂದು ಮುಂಬಯಿಯಲ್ಲಿ ಜರುಗಿದ್ದು, 34 ವರ್ಷದ ಮಹಿಳೆಯ ಮೇಲೆ ಟೆಂಪೋ ಒಂದರಲ್ಲಿ ಮಾರಣಾಂತಿಕ ಲೈಂಗಿಕ ಹಲ್ಲೆ ನಡೆದು ಆಕೆಯ ಪರಿಸ್ಥಿತಿ ಗಂಭೀರವಾಗಿದೆ.
ಇಲ್ಲಿನ ಸಾಕಿನಾಕಾ ಉಪನಗರ ಪ್ರದೇಶದಲ್ಲಿ ಈ ದಾರುಣ ಘಟನೆ ನಡೆದಿದ್ದು, ಪ್ರಕರಣ ಸಂಬಂಧ ಮೋಹನ್ ಚೌಹಾಣ್ (45) ಎಂಬ ಆಪಾದಿತನನ್ನು ಪೊಲೀಸರು ಘಟನೆ ನಡೆದ ಕೆಲವೇ ಗಂಟೆಗಳ ಒಳಗೆ ಬಂಧಿಸಿದ್ದಾರೆ. ಈತನ ವಿರುದ್ಧ ಐಪಿಸಿಯ 307ನೇ ಸೆಕ್ಷನ್ (ಕೊಲೆಗೆ ಯತ್ನ) ಹಾಗೂ 376 (ಅತ್ಯಾಚಾರ) ಗಳ ಅಡಿ ಪ್ರಕರಣ ದಾಖಲಿಸಲಾಗಿದೆ.
ಇಲ್ಲಿನ ಖೈರಾನಿ ರಸ್ತೆ ಬದಿಯಲ್ಲಿ ಪಾರ್ಕ್ ಮಾಡಲಾದ ಟೆಂಪೋ ಒಂದರಲ್ಲಿ ಮಹಿಳೆಯೊಬ್ಬರ ಮೇಲೆ ವ್ಯಕ್ತಿಯೊಬ್ಬ ಬರ್ಬರವಾಗಿ ಹಲ್ಲೆ ಮಾಡುತ್ತಿರುವುದಾಗಿ ಶುಕ್ರವಾರ ಬೆಳಿಗ್ಗೆ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಬಂದಿದೆ.
ಸಾಂಕ್ರಾಮಿಕದ ಸಂದರ್ಭದಲ್ಲಿ ʼಉದ್ಯೋಗʼ ಕಳೆದುಕೊಂಡವರಿಗೆ ESIC ನಿಂದ ಗುಡ್ ನ್ಯೂಸ್
ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ರಕ್ತದ ಮಡುವಿನಲ್ಲಿ ಬಿದ್ದ ಮಹಿಳೆಯ ದೇಹ ಕಂಡಿದ್ದಾರೆ. ಕೂಡಲೇ ಆಕೆಯನ್ನು ಹತ್ತಿರದ ರಾಜವಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಾಥಮಿಕ ಆರೋಗ್ಯ ವರದಿ ಪ್ರಕಾರ ಆಕೆಯ ಮೇಲೆ ಅತ್ಯಾಚಾರ ನಡೆದಿದ್ದು, ಖಾಸಗಿ ಅಂಗಗಳ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆಯೂ ನಡೆದಿದೆ. ವಾಹನದ ಒಳಗೆ ರಕ್ತದ ಕಲೆಗಳು ಕಂಡುಬಂದಿವೆ. ಮಹಿಳೆಯ ಪರಿಸ್ಥಿತಿ ಬಹಳ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಡಿಸೆಂಬರ್ 2012ರಲ್ಲಿ ’ನಿರ್ಭಯಾ’ ಎಂದು ದೇಶದೆಲ್ಲೆಡೆ ಗೊತ್ತಿರುವ ಯುವತಿ ಮೇಲೆ ಚಲಿಸುತ್ತಿರುವ ಬಸ್ ಒಂದರಲ್ಲಿ ಕ್ರೂರಿಗಳ ಗುಂಪೊಂದು ಮಾರಣಾಂತಿಕ ಅತ್ಯಾಚಾರವೆಸಗಿ ಕಬ್ಬಿಣ ರಾಡ್‌ನಿಂದ ಆಕೆ ಮೇಲೆ ಹಲ್ಲೆ ಮಾಡಿದ ಕೊಲ್ಲಲಾದ ಘಟನೆ ದೇಶವನ್ನೇ ಆಕ್ರೋಶದಲ್ಲಿ ಕುದಿಯುವಂತೆ ಮಾಡಿತ್ತು. ಅನೇಕ ದಿನಗಳ ಕಾಲ ಜೀವನ್ಮರಣದ ನಡವೆ ಹೋರಾಡಿದ ನಿರ್ಭಯಾ ಕೊನೆಯುಸಿರೆಳೆದಿದ್ದರು.