alex Certify ನಿಫಾ ವೈರಸ್ ಕೊಂಚ ನಿಯಂತ್ರಣಕ್ಕೆ; ಕೇರಳದಲ್ಲಿ ನಿರ್ಬಂಧಗಳು ಸಡಿಲಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಫಾ ವೈರಸ್ ಕೊಂಚ ನಿಯಂತ್ರಣಕ್ಕೆ; ಕೇರಳದಲ್ಲಿ ನಿರ್ಬಂಧಗಳು ಸಡಿಲಿಕೆ

ತಿರುವನಂತಪುರಂ: ಕೇರಳದಲ್ಲಿ ನಿಫಾ ವೈರಸ್ ಸೋಂಕು ಕೊಂಚ ನಿಯಂತ್ರಣಕ್ಕೆ ಬಂದಿದೆ. 6ನೇ ದಿನವೂ ನಿಫಾ ವೈರಸ್ ನ ಹೊಸ ಪ್ರಕರಣ ಪತ್ತೆಯಾಗದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಿರ್ಬಂಧಗಳನ್ನು ಸಡಿಸಲಾಗಿದೆ.

ನಿಫಾ ವೈರಸ್ ಪತ್ತೆಯಾಗಿದ್ದ ಕೊಯಿಕ್ಕೋಡ್ ಜಿಲ್ಲೆಯ ಗ್ರಾಮಗಳಲ್ಲಿ ಕಂಟೈನ್ಮೆಂಟ್ ಝೋನ್ ಗಳನ್ನು ನಿರ್ಮಿಸಿ ನಿರ್ಬಂಧ ವಿಧಿಸಲಾಗಿತ್ತು. ಕೋಯಿಕ್ಕೋಡ್ ಜಿಲ್ಲಾಡಳಿತ ಈ ನಿರ್ಬಂಧವನ್ನು ಹಿಂಪಡೆದಿದೆ. ಅಲ್ಲದೇ ವಟಕರ ತಾಲೂಕಿನಲ್ಲಿಯೂ ಸೋಂಕು ನಿಯಂತ್ರಣಕ್ಕೆ ಬಂದಿದೆ ಎಂದು ಆರೋಗ್ಯ ಇಲಾಖೆ ಮೌಲ್ಯಮಾಪನದಲ್ಲಿ ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಎ.ಗೀತಾ ಕಂಟೈನ್ಮೆಂಟ್ ಜೋನ್ ಗಳನ್ನು ತೆರವು ಮಾಡಿದ್ದಾರೆ. ಈ ವರೆಗೆ ಕೋಯಿಕ್ಕೋಡ್ ನಲ್ಲಿ 6 ನಿಫಾ ವೈರಸ್ ಪ್ರಕರಣಗಳು ಪತ್ತೆಯಾಗಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ನಾಲ್ವರಿಗೆ ಚಿಕಿತ್ಸೆ ಮುಂದುವರೆದಿದೆ. ಕಳೆದ ಆರು ದಿನಗಳಿಂದ ಯಾವುದೇ ಹೊಸ ಪ್ರಕರಣಗಳು ವರದಿಯಾಗಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...