ಸ್ಪೆಲ್ಲಿಂಗ್ ಬೀ ಸ್ಪರ್ಧೆಯಲ್ಲಿ ಭಾರತೀಯರದ್ದೇ ಪಾರುಪತ್ಯ ಎಂಬುದು ಯಾವಾಗಲೂ ಸ್ಥಾಪಿತವಾದ ವಾಸ್ತವ.
ಅಮೆರಿಕದ ಸ್ಪೆಲ್ಲಿಂಗ್ ಬೀ ಸ್ಫರ್ಧೆಯ ಈ ವರ್ಷದ ಅವತರಣಿಕೆಯಲ್ಲಿ ಫೈನಲ್ ತಲುಪಿರುವ 11 ಮಂದಿಯ ಪೈಕಿ ಒಂಬತ್ತು ಮಂದಿ ಭಾರತೀಯ ಮೂಲದ ಮಕ್ಕಳೇ ಆಗಿದ್ದಾರೆ.
ಕಳೆದ ದಶಕದಿಂದಲೂ ಭಾರತೀಯರೇ ಮೇಲುಗೈ ಸಾಧಿಸಿಕೊಂಡು ಬಂದಿರುವ ಈ ಸ್ಫರ್ಧೆಯ ಈ ವರ್ಷದ ಫೈನಲ್ ಜುಲೈ 8ರಂದು ನಡೆಯಲಿದೆ. 2021 ಸ್ಕ್ರಿಪ್ಸ್ ರಾಷ್ಟ್ರೀಯ ಸ್ಪೆಲ್ಲಿಂಗ್ ಬೀ ಫೈನಲ್‌ನಲ್ಲಿ ಈ 11 ಅಭ್ಯರ್ಥಿಗಳು ಸೆಣಸಲಿದ್ದಾರೆ.
ಭಾರತೀಯ-ಅಮೆರಿಕನ್ನರಾದ ನ್ಯೂಯಾರ್ಕ್‌ನ ಭಾವನಾ ಮದಿನಿ, 13; ಉತ್ತರ ಕರೋಲಿನಾದ ಚಾರ್ಲೋಟ್‌ನ ಶ್ರೀತನ್ ಗಜುಲಾ,14; ವರ್ಜೀನಿಯಾದ ಲೇಸ್ಬರ್ಗ್‌ನ ಆಶ್ರಿತಾ ಗಾಂಧಾರಿ, 14; ಇಲಿನಾಯ್ ನ ಅವಾನಿ ಜೋಶಿ, 13; ನ್ಯೂ ಆರ್ಲಿಯನ್ಸ್‌ನ ಜಾಯ್ಲಾ ಅವಾಂತ್, 14; ಟೆಕ್ಸಾಸ್‌ನ ವಿವಿಂಶಾ ವೇದೂರು, 10; ಡಲ್ಲಾಸ್‌ನ ಧ್ರುವ್ ಭಾರತೀಯ, 12; ಟೆಕ್ಸಾಸ್‌ನ ವಿಹಾನ್ ಸಿಬಾಲ್ 12; ಅಕ್ಷಾಯ್ನಿ ಕಮ್ಮ, 13 ಮತ್ತು ಸ್ಯಾನ್ ಫ್ರಾನ್ಸಿಸ್ಕೋದ ಚೈತ್ರಾ,12 ಸ್ಪರ್ಧೆಯ ಫೈನಲ್ ತಲುಪಿದ್ದಾರೆ.