ಅಹಮದಾಬಾದ್: ಮಕ್ಕಳು ಆಟವಾಡುತ್ತಿದ್ದಾರೆ ಎಂದು ಪೋಷಕರ ಗಮನ ಸ್ವಲ್ಪ ಕಡಿಮೆಯಾದರೂ ಮಕ್ಕಳು ಎಂತಹ ಅಪಾಯಗಳಿಗೀಡಾಗುತ್ತಾರೆ ನೋಡಿ… ಆಟವಾಡುತ್ತಿದ್ದ ಮಗು ಸಣ್ಣ ಎಲ್ಇಡಿ ಬಲ್ಬ್ ನ್ನು ನುಂಗಿರುವ ಘಟನೆ ಅಹಮದಾಬಾದ್ ನಲ್ಲಿ ನಡೆದಿದೆ.
ಮಧ್ಯಪ್ರದೇಶದ ರತ್ಲಾಮ್ ಮೂಲದ 9 ತಿಂಗಳ ಮಗು ಆಟಿಕೆ ಮೊಬೈಲ್ ಫೋನ್ ನೊಂದಿಗೆ ಆಟವಾಡುತ್ತಿತ್ತು. ಈ ವೇಳೆ ಅದರಲ್ಲಿದ್ದ ಆಂಟೇನಾದಲ್ಲಿ ಸಣ್ಣ ಎಲ್ಇಡಿ ಬಲ್ಬ್ ಅಳವಡಿಸಲಾಗಿತ್ತು. ಇದನ್ನು ತೆಗೆದು ಮಗು ಬಾಯಿಗೆ ಹಾಕಿಕೊಂಡಿದೆ. ಮಗು ಉಸಿರಾಟದ ತೊಂದರೆಯಿಂದ ಒದ್ದಾಡುತ್ತಿದ್ದಾಗ ಪೋಷಕರು ಗಮನಿಸಿದ್ದಾರೆ.
ತಕ್ಷಣ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಈ ವೇಳೆ ವೈದ್ಯರು ಎಕ್ಸ್ ರೇ ಮಾಡಿದಾಗ ಮಗು ಎಲ್ಇಡಿ ಬಲ್ಬ್ ನುಂಗಿರುವುದು ಗೊತ್ತಾಗಿದೆ. ಶಸ್ತ್ರಚಿಕಿತ್ಸೆ ಮೂಲಕ ಮಗುವಿನ ಶ್ವಾಸಕೋಶದಲ್ಲಿದ್ದ ಎಲ್ಇಡಿ ಬಲ್ಬ್ ಹೊರತೆಗೆಯಲಾಗಿದೆ. ಮುಗುವಿಗೆ ಚಿಕಿತ್ಸೆ ಮುಂದುವರೆದಿದೆ.