ಬೆಂಗಳೂರು: ಹಾಫ್ ಹೆಲ್ಮೆಟ್ ನಿಷೇಧಿಸುವಂತೆ ರಾಜ್ಯ ಸರ್ಕಾರಕ್ಕೆ ನಿಮ್ಹಾನ್ಸ್ ನಿಂದ ಶಿಫಾರಸು ಮಾಡಲಾಗಿದೆ. ನಿಮಾನ್ಸ್ ನಿಂದ ಬರೋಬ್ಬರಿ ಒಂದು ಲಕ್ಷ ಸವಾರರ ಸರ್ವೇ ಮಾಡಲಾಗಿದೆ.
ಶೇಕಡ 26 ರಷ್ಟು ಸವಾರರು ಹಾಫ್ ಹೆಲ್ಮೆಟ್ ಧರಿಸುತಿದ್ದಾರೆ. ಅಪಘಾತಗಳಾದಾಗ ತಲೆಗೆ ಗಂಭೀರ ಗಾಯಗಳಾಗುತ್ತವೆ. ಹೀಗಾಗಿ ಫುಲ್ ಹೆಲ್ಮೆಟ್ ಧರಿಸಿದ್ದರೆ ಸಮಸ್ಯೆ ತಪ್ಪಿಸಬಹುದು ಎಂದು ಹೇಳಲಾಗಿದೆ.
ಹೆಲ್ಮೆಟ್ ಬಳಸುವವರ ಮನಸ್ಥಿತಿ ಹೇಗಿರುತ್ತದೆ? ಬೈಕ್ ಸವಾರರು ಹಾಫ್ ಹೆಲ್ಮೆಟ್ ಏಕೆ ಧರಿಸುತ್ತಾರೆ? ನಿಯಮ ಉಲ್ಲಂಘಿಸುವುದಕ್ಕೆ ಸೂಕ್ತ ಕಾರಣವೇನು? ಇದು ಮಾನಸಿಕ ಕಾಯಿಲೆಯಾಗಿ ಪರಿಣಮಿಸುತ್ತದೆಯೇ? ಎಂಬುದರ ಬಗ್ಗೆ ಪೊಲೀಸರ ಜೊತೆಗೂಡಿ ಸಂಶೋಧನೆ ಮಾಡಲು ನಿಮಾನ್ಸ್ ಪ್ಲಾನ್ ಮಾಡಿಕೊಂಡಿದೆ ಎನ್ನಲಾಗಿದೆ.