ರಾಮನಗರ: ಬಿಡದಿ ಬಳಿಯ ತೋಟದ ಮನೆ ಮೇಲೆ ಚುನಾವಣಾ ಅಧಿಕಾರಿಗಳು ದಾಳಿ ನಡೆಸಿದ ವಿಚಾರವಾಗಿ ಪ್ರತಿಕ್ರಿಯಿಸಿರುವ ನಿಖಿಲ್ ಕುಮಾರಸ್ವಾಮಿ ಚುನಾವಣಾ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.
ಸಾಮಾನ್ಯವಾಗಿ ಯುಗಾದಿ ಹಬ್ಬದಲ್ಲಿ ಹೊಸತೊಡಕು ಊಟ ಹಾಕುತ್ತೇವೆ. ನಮ್ಮ ತೋಟದಲ್ಲಿ 150 ಮಂದಿ ಕೆಲಸಗಾರರಿಗೆ ಊಟದ ವ್ಯವಸ್ಥೆ ಮಾಡಿದ್ದೆವು. ಅಲ್ಲದೇ ಬಿಜೆಪಿ-ಜೆಡಿಎಸ್ ಮುಖಂಡರೂ ಊಟಕ್ಕೆ ಸೇರುವ ತೀರ್ಮಾನ ಮಡಿದ್ದೆವು. ಅಲ್ಲಿ ಯಾವುದೇ ಪಾರ್ಟಿ ಕಾರ್ಯಕ್ರಮ ಮಾಡುತ್ತಿರಲಿಲ್ಲ.ಕಾಂಗ್ರೆಸ್ ನವರ ರೀತಿ ಕುಕ್ಕರ್, ಸೀರೆ ಹಂಚುವ ಕಾರ್ಯಕ್ರಮ ನಮ್ಮದಲ್ಲ ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ ನವರು ಸೋಲುವ ಆತಂಕದಲ್ಲಿ ಆರೋಪಗಳನ್ನು ಮಾಡಿದ್ದಾರೆ. ಕಾಂಗೆಸ್ ನವರು ಕುಕ್ಕರ್, ಸೀರೆ ಹಂಚಿದರೂ ಚುನಾವಣಾ ಆಯೋಗ ಯಾಕೆ ಕ್ರಮ ವಹಿಸಿಲ್ಲ? ನಮ್ಮ ತೋಟದ ಮನೆಗೆ ಬಂದು ಪರಿಶೀಲನೆ ನಡೆಸಿದ್ದಾರೆ. ಒಟ್ಟಾರೆ ಚುನಾವಣಾ ಅಧಿಕಾರಿಗಳು ಕಾಂಗ್ರೆಸ್ ಕೈಗೊಂಬೆಗಳಂತಾಗಿದ್ದಾರೆ ಎಂದು ಕಿಡಿಕಾರಿದರು.