ಬೆಂಗಳೂರು : ನಿಖಿಲ್ ಧರಿಸಿದ್ದು ಹುಲಿ ಉಗುರಿನ ಪೆಂಡೆಂಟ್ ಅಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.
ಇಂದು ಸುದ್ದಿಗಾರರ ಜೊತೆ ಮಾತನಾಡಿದ ಕುಮಾರಸ್ವಾಮಿ ‘ ಮದುವೆಯ ಸಂಭ್ರಮದಲ್ಲಿ ನಿಖಿಲ್ ಕುಮಾರಸ್ವಾಮಿ ಸರ ಧರಿಸಿದ್ದರು, ಆದರೆ ಅದು ಹುಲಿ ಉಗುರು ಅಲ್ಲ. ಮಾಧ್ಯಮಗಳಲ್ಲಿ ಪ್ರಸಾರವಾದ ಸುದ್ದಿ ನೋಡಿ ನಾನೇ ಅರಣ್ಯಾಧಿಕಾರಿಗಳನ್ನು ಬರಲು ಹೇಳಿ ತನಿಖೆಗೆ ಸಹಕರಿಸಿದ್ದೇನೆ, ನಾನೇ ಎಲ್ಲದಕ್ಕೂ ಸಹಿ ಹಾಕಿದ್ದೇನೆ ಎಂದರು.
ನಿಖಿಲ್ ಒಡವೆ ಹಾಕಲ್ಲಾ..ಆತನಿಗೆ ಬಂಗಾರ ಹಾಕುವ ಶೋಕಿ ಇಲ್ಲಾ..! ಯಾರೋ ಆತನಿಗೆ ಮದುವೆಯಲ್ಲಿ ಗಿಫ್ಟ್ ಕೊಟ್ಟಿದ್ದಾರೆ, ನಾವಂತೂ ಇಂತಹದ್ದಕ್ಕೆ ಆಸ್ಪದ ನೀಡಲ್ಲ..ಎಷ್ಟು ಮನೆಯಲ್ಲಿ ಇಂತಹದ್ದು ಇಲ್ಲಾಇದು ಹುಲಿ ಉಗುರು ಅಲ್ಲ…ಹುಲಿ ಉಗುರು ಅಂತ ಕೊಟ್ಟಿದ್ದರೆ ನಾವು ತಗೋತಿದ್ವಾ..? ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಹುಲಿ ಉಗುರು ಪ್ರಕರಣಕ್ಕೆ ಸಂಬಂಧಿಸಿದಂತೆ ನಿಖಿಲ್ ಕುಮಾರಸ್ವಾಮಿ, ನಟ ದರ್ಶನ್, ಜಗ್ಗೇಶ್, ರಾಕ್ ಲೈನ್ ವೆಂಕಟೇಶ್ ನಿವಾಸದ ಮೇಲೂ ಅರಣ್ಯಾಧಿಕಾರಿಗಳು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.
ರಾಜ್ಯದಲ್ಲಿ ಹುಲಿ ಉಗುರು, ಚರ್ಮ ಧರಿಸಿದ್ದವರ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ಆಗ್ರಹಗಳು ಕೇಳಿ ಬಂದಿವೆ. ವನ್ಯ ಜೀವಿ ಚರ್ಮ, ಉಗುರು ಇನ್ನಿತರ ದೇಹದ ಭಾಗಗಳ ಬಳಕೆ, ಸಾಗಾಣೆ, ಸಂಗ್ರಹಿಸಿ ಇಟ್ಟುಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ. ಕಾನೂನು ಎಲ್ಲರಿಗೂ ಸಮಾನವಾಗಿದೆ. ಅಪರಾಧ ಸಾಬೀತಾದರೆ ಅರಣ್ಯ ಇಲಾಖೆ ಸೂಕ್ತ ಕ್ರಮಕೈಗೊಳ್ಳಲಿದೆ ಎಂದು ಸಚಿವ ಈಶ್ವರ್ ಖಂಡ್ರೆ ಸ್ಪಷ್ಟಪಡಿಸಿದ್ದಾರೆ.