alex Certify 400 ವರ್ಷಗಳ ಹಿಂದೆಯೇ ಅಸ್ತಿತ್ವದಲ್ಲಿತ್ತಾ ನೈಕಿ ಶೂ ? ಅಚ್ಚರಿಗೆ ಕಾರಣವಾಗಿದೆ ಈ ಪೇಂಟಿಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

400 ವರ್ಷಗಳ ಹಿಂದೆಯೇ ಅಸ್ತಿತ್ವದಲ್ಲಿತ್ತಾ ನೈಕಿ ಶೂ ? ಅಚ್ಚರಿಗೆ ಕಾರಣವಾಗಿದೆ ಈ ಪೇಂಟಿಂಗ್

ಚಿತ್ರ ಪ್ರದರ್ಶನದಲ್ಲಿ 400 ವರ್ಷಗಳಷ್ಟು ಹಳೆಯದಾದ ವರ್ಣಚಿತ್ರವನ್ನು ಕಂಡ ಕೆಲವರು ಗೊಂದಲಕ್ಕೊಳಗಾಗಿದ್ದಾರೆ. ಪೇಂಟಿಂಗ್ ನಲ್ಲಿ ಬಾಲಕ ನೈಕ್ ಶೂ ಧರಿಸಿರುವುದು ಈ ಗೊಂದಲಕ್ಕೆ ಕಾರಣ.  ಅಷ್ಟಕ್ಕೂ ನೈಕ್ ಶೂ ಗೂ ಈ ಭಾವಚಿತ್ರಕ್ಕೂ ಅದೆಂಥಾ ಸಂಬಂಧ ಅಂತಾ ಯೋಚಿಸ್ತಿದ್ದೀರಾ? ಹಾಗಿದ್ದರೆ ಮುಂದೆ ಓದಿ.

17ನೇ ಶತಮಾನದಲ್ಲಿ ಡಚ್ ಕಲಾವಿದ ಫರ್ಡಿನಾಂಡ್ ಬೋಲ್ ಚಿತ್ರಿಸಿದ ಪೋಟ್ರೇಟ್ ಆಫ್ ಎ ಬಾಯ್ ಎಂಬ ಶೀರ್ಷಿಕೆಯ ಪೇಂಟಿಂಗ್ ಇದಾಗಿದೆ. ಈ ವರ್ಣಚಿತ್ರದಲ್ಲಿ ಎಂಟು ವರ್ಷದ ಬಾಲಕನೊಬ್ಬ ಗೋಬ್ಲೆಟ್ ಹಿಡಿದು ನಿಂತಿರುವುದನ್ನು ಚಿತ್ರಿಸಲಾಗಿದೆ. ಗೋಬ್ಲೆಟ್ ಅನ್ನು ಕೆಂಪು ಬಟ್ಟೆಯಿಂದ ಮುಚ್ಚಿದ ಮೇಜಿನ ಮೇಲೆ ಇರಿಸಲಾಗಿದೆ. ಬಾಲಕ ಕಪ್ಪು ಜಾಕೆಟ್, ಬಿಳಿ ಶರ್ಟ್ ಮತ್ತು ಕಪ್ಪು ಬೂಟುಗಳನ್ನು ಧರಿಸಿದ್ದಾನೆ.

ಈ ಚಿತ್ರಕಲೆಯಲ್ಲಿರುವ ಬಾಲಕ ಫ್ರೆಡ್ರಿಕ್ ಸ್ಲುಯ್ಸ್ಕೆನ್. ಕಲಾವಿದನ ಹೆಂಡತಿಯ ಎರಡನೇ ಸೋದರ ಸಂಬಂಧಿ ಎಂದು ನಂಬಲಾಗಿದೆ. ಬಾಲಕನ ಕಾಲಿನಲ್ಲಿ ಕಪ್ಪು ಬೂಟುಗಳನ್ನು ಚಿತ್ರಿಸಲಾಗಿದ್ದು, ಇದನ್ನು ಹತ್ತಿರದಿಂದ ಪರಿಶೀಲಿಸಿದಾಗ ನೈಕ್ ಲೋಗೋವನ್ನು ಹೋಲುತ್ತದೆ. ಈ ನೈಕ್ ಶೂ ಅನ್ನು 1964 ರಲ್ಲಿ ಸ್ಥಾಪಿಸಲಾಯಿತು. ಹೀಗಾಗಿ ಈ ಭಾವಚಿತ್ರದಲ್ಲಿ ಬಾಲಕ ಧರಿಸಿರುವ ಬೂಟು ಅಚ್ಚರಿಗೆ ಕಾರಣವಾಗಿದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...