alex Certify ಕೇವಲ 35 ಕಿ.ಮೀ ಉದ್ದವಿರುವ ಈ ರಸ್ತೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 900….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇವಲ 35 ಕಿ.ಮೀ ಉದ್ದವಿರುವ ಈ ರಸ್ತೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 900….!

ಕೇವಲ 35 ಕಿ.ಮೀ. ಉದ್ದವಿರುವ ರಾಷ್ಟ್ರೀಯ ಹೆದ್ದಾರಿಯೊಂದರಲ್ಲಿ ಐದು ವರ್ಷಗಳಲ್ಲಿ ಬರೋಬ್ಬರಿ 900 ಜನರು ಅಪಘಾತದಲ್ಲಿ ಸಾವನ್ನಪ್ಪಿರುವ ವಿಷಯ ಬೆಳಕಿಗೆ ಬಂದಿದೆ.

ಅಲ್ಲದೇ, ಈ ರಸ್ತೆಯಿಂದ ಇದೇ ಅವಧಿಯಲ್ಲಿ 272 ಕೋಟಿ ರೂ. ಆದಾಯ ಬಂದಿದೆ. 2017ರಿಂದ 2021 ರ ವರೆಗೆ ಈ ಹೆದ್ದಾರಿಯಿಂದ 272 ರೂ. ಕೋಟಿ ರೂ. ಆದಾಯ ಬಂದಿದ್ದು, ಈ ಅವಧಿಯಲ್ಲಿ 900 ಜನರು ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

ಹಾಪುರ್ ಮತ್ತು ಮೊರಾದಾದಾಬ್ ಮಧ್ಯೆ ಇರುವ ರಾಷ್ಟ್ರೀಯ ಹೆದ್ದಾರಿ- 24ರ ಹೆದ್ದಾರಿಯಲ್ಲಿಯೇ ಈ ಅಪಘಾತಗಳು ನಡೆದಿವೆ. ಇದು ಬ್ರಿಜ್‌ ಘಾಟ್ ಪ್ಲಾಜಾದ ಅಧೀನದಲ್ಲಿ ಈ ಟೋಲ್ ರಸ್ತೆ ವಿಸ್ತರಣೆ ಮಾಡಲಾಗಿದೆ. ಈ ಹೆದ್ದಾರಿಯಿಂದ ಗಳಿಸಿದ ಆದಾಯ ಹಾಗೂ ಸಾವಿನ ಕುರಿತು ಸರ್ಕಾರ ಅಂಕಿ- ಅಂಶಗಳನ್ನು ಬಿಡುಗಡೆ ಮಾಡಿದೆ.

ಈ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ 195.51 ಕೋಟಿ ರೂ. ಖರ್ಚು ಮಾಡಲಾಗಿದ್ದು, 2017ರಿಂದ 21ರ ಅವಧಿಯಲ್ಲಿ ಈ ರಸ್ತೆಯಿಂದ ಸರ್ಕಾರವು ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರದಿಂದ 272 ಕೋಟಿ ರೂ. ಗಳಿಸಿದೆ. ಅಲ್ಲದೇ, ಈ ಅವಧಿಯಲ್ಲಿಯೇ ಈ ಚಿಕ್ಕ ಹೆದ್ದಾರಿಯಲ್ಲಿ ಬರೋಬ್ಬರಿ 900 ಜನರು ಪ್ರಾಣ ತೆತ್ತಿದ್ದಾರೆ.

2018-19ರ ಅವಧಿಯಲ್ಲಿ ಈ ರಸ್ತೆಯಲ್ಲಿ 136 ಜನರು ಪ್ರಾಣ ಕಳೆದುಕೊಂಡಿದ್ದಾರೆ. 2019-20ರಲ್ಲಿ 184 ಜನರು ಹಾಗೂ 2021ರಲ್ಲಿ 238 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...