ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಸ್ವತ್ತುಗಳಿಗೆ ಒಂದು ಬಾರಿ ಪರಿಹಾರ ಯೋಜನೆಯಲ್ಲಿ ತೆರಿಗೆ ಪಾವತಿಗೆ ನವೆಂಬರ್ 30 ಕೊನೆಯ ದಿನವಾಗಿದೆ.
ತೆರಿಗೆದಾರರ ಹಿತದೃಷ್ಟಿಯಿಂದ ಇಂದು ರಾತ್ರಿ 9ರವರೆಗೆ ಪಾಲಿಕೆಯ ಕಂದಾಯ ವಿಭಾಗದ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಲಾಗಿದೆ. ಮಹಿಳಾ ಸಿಬ್ಬಂದಿ ಹೊರತುಪಡಿಸಿ ಹೆಚ್ಚಿಸುವ ಅಧಿಕಾರಿಗಳು ಸೇರಿ ಇತರೆ ಸಿಬ್ಬಂದಿ ಮಧ್ಯರಾತ್ರಿ 12 ಗಂಟೆಯವರೆಗೆ ಕಾರ್ಯನಿರ್ವಹಿಸಬೇಕೆಂದು ಬಿಬಿಎಂಪಿ ಸೂಚಿಸಿದೆ.
ಮಧ್ಯರಾತ್ರಿವರೆಗೆ ಕಾರ್ಯನಿರ್ವಹಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಪ್ರಶಂಸನಾ ಪತ್ರ ನೀಡಲಾಗುವುದು. ಪಾಲಿಕೆ ವ್ಯಾಪ್ತಿಯಲ್ಲಿನ ಸ್ವತ್ತುಗಳಿಗೆ ಒಂದು ಬಾರಿ ಪರಿಹಾರ ಯೋಜನೆ ನವಂಬರ್ 30ರವರೆಗೆ ಜಾರಿಯಲ್ಲಿದೆ. ಕೇವಲ ಒಂದೇ ದಿನ ಅವಕಾಶ ಇರುವುದರಿಂದ ಹೆಚ್ಚಿನ ತೆರಿಗೆದಾರರು ಆಸ್ತಿ ತೆರಿಗೆ ಪಾವತಿಸಲು ಕಚೇರಿಗೆ ಭೇಟಿ ನೀಡುವ ಸಾಧ್ಯತೆ ಇದೆ. ಹೀಗಾಗಿ ತೆರಿಗೆದಾರರ ಹಿತದೃಷ್ಟಿಯಿಂದ ಹೆಚ್ಚು ಅವಧಿಯಲ್ಲಿ ಕೆಲಸ ಮಾಡುವಂತೆ ತಿಳಿಸಲಾಗಿದೆ.