ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಜನರಲ್ಲಿ ಹೃದಯದ ತೊಂದರೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ ಎಂದು ಅಂತಾರಾಷ್ಟ್ರೀಯ ಸಂಶೋಧಕರ ತಂಡದ ನೇತೃತ್ವದ ಹೊಸ ಅಧ್ಯಯನವು ಮಾಹಿತಿ ನೀಡಿದೆ.
ಸಂಶೋಧನೆ ತಂಡದ ಪ್ರಕಾರ, ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಜನರು ಹೃತ್ಕರ್ಣದ ಕಂಪನ ಎಂದು ಕರೆಯಲ್ಪಡುವ ಅನಿಯಮಿತ ಮತ್ತು ಅಸಹಜವಾಗಿ ವೇಗವಾಗಿ ಹೃದಯದ ಲಯವನ್ನು ಬೆಳೆಸುವ ಅಪಾಯವನ್ನು ಹೊಂದಿರುತ್ತಾರೆ ಎಂಬ ವರದಿಯನ್ನು ಯುರೋಪಿಯನ್ ಹಾರ್ಟ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.
ಈ ಅಧ್ಯಯನವು “ರಾತ್ರಿ ಪಾಳಿ ಕೆಲಸ ಮತ್ತು ಹೃತ್ಕರ್ಣದ ಕಂಪನ ನಡುವಿನ ಸಂಬಂಧದ ಬಗ್ಗೆ ತನಿಖೆ ಮಾಡಲಾಗಿದೆ. ಯುಕೆ ಬಯೋಬ್ಯಾಂಕ್ ಡೇಟಾಬೇಸ್‌ನಲ್ಲಿ 2,83,657 ಜನರ ಮಾಹಿತಿಯನ್ನು ಬಳಸಿ, ಸಂಶೋಧಕರು ತಮ್ಮ ಜೀವಿತಾವಧಿಯಲ್ಲಿ ದೀರ್ಘ ಮತ್ತು ಆಗಾಗ್ಗೆ ಜನರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿರುವುದನ್ನು ಕಂಡುಕೊಂಡರು. ಅವರ ಹೃತ್ಕರ್ಣ ಕಂಪನದ (ಎಫ್) ಅಪಾಯವು ಹೆಚ್ಚಾಗಿದೆ. ರಾತ್ರಿ ಪಾಳಿಯ ಕೆಲಸವು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ಆದರೆ ಪಾರ್ಶ್ವವಾಯು ಅಥವಾ ಹೃದಯ ವೈಫಲ್ಯಕ್ಕೆ ಸಂಬಂಧಿಸಿಲ್ಲ” ಎಂದು ಸಂಶೋಧನಾ ವರದಿ ತಿಳಿಸಿದೆ.
ಇದರ ಜೊತೆಯಲ್ಲಿ, ಶಾಂಘೈ ಒಂಬತ್ತನೇ ಪೀಪಲ್ಸ್ ಹಾಸ್ಪಿಟಲ್ ಮತ್ತು ಚೀನಾದ ಶಾಂಘೈ ಜಿಯಾವೊಟಾಂಗ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್ ನ ಪ್ರೊಫೆಸರ್ ಯಿಂಗ್ಲಿ ಲು ಮತ್ತು ಚೀನಾದ ತಲಾನ್ ಯೂನಿವರ್ಸಿಟಿ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಮತ್ತು ಟ್ರಾಫಿಕಲ್ ಮೆಡಿಸಿನ್ ನ ಪ್ರೊಫೆಸರ್ ಲು ಕಿ ನೇತೃತ್ವದ ಸಂಶೋಧಕರು, ಯುಎಸ್ಎ, ನ್ಯೂ ಆರ್ಲಿಯನ್ಸ್ ಹೃತ್ಕರ್ಣ ಕಂಪನದ ಅನುವಂಶಿಕ ಪ್ರವೃತ್ತಿಯು ಹೆಚ್ಚಿನ ಅಪಾಯದಲ್ಲಿ ಪಾತ್ರ ವಹಿಸಬಹುದೇ ಎಂದು ಅಭ್ಯಸಿಸಿದೆ. 166 ಅನುವಂಶಿಕ ವ್ಯತ್ಯಾಸಗಳನ್ನು ಆಧರಿಸಿ ಒಟ್ಟಾರೆ ಅನುವಂಶಿಕ ಅಪಾಯವನ್ನು ಮೌಲ್ಯಮಾಪನ ಮಾಡಿದ್ದಾರೆ. ಆದರೆ, ಈ ಸ್ಥಿತಿಯೊಂದಿಗೆ ಸಂಬಂಧಿತ ಎಂದು ತಿಳಿದಿರುವ ಅನುವಂಶಿಕ ಅಪಾಯದ ಮಟ್ಟಗಳು, ಕೆಲಸದ ರಾತ್ರಿ ಪಾಳಿಗಳು ಮತ್ತು ಹೃತ್ಕರ್ಣ ಕಂಪನದ ಅಪಾಯದ ನಡುವಿನ ಸಂಬಂಧದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಕಂಡುಕೊಂಡಿದ್ದಾರೆ.
“ಈ ರೀತಿಯ ಅಧ್ಯಯನವು ರಾತ್ರಿ ಪಾಳಿ ಮತ್ತು ಹೃತ್ಕರ್ಣದ ಕಂಪನ ಮತ್ತು ಹೃದ್ರೋಗಗಳ ನಡುವಿನ ಸಂಬಂಧವನ್ನು ತೋರಿಸಲು ಸಾಧ್ಯವಿಲ್ಲವಾದರೂ, ನಮ್ಮ ಫಲಿತಾಂಶಗಳು ಪ್ರಸ್ತುತ ಮತ್ತು ಜೀವಮಾನದ ರಾತ್ರಿ ಪಾಳಿ ಕೆಲಸವು ಈ ಪರಿಸ್ಥಿತಿಗಳ ಅಪಾಯವನ್ನು ಹೆಚ್ಚಿಸಬಹುದು ಎಂದು ಸೂಚಿಸುತ್ತದೆ” ಎಂದು ಪ್ರೊ. ಲು ಹೇಳಿದರು. ಅಲ್ಲದೆ “ರಾತ್ರಿ ಪಾಳಿಯ ಕೆಲಸದ ಅವಧಿಯನ್ನು ಕಡಿಮೆ ಮಾಡುವುದು, ಹೃದಯ ಮತ್ತು ರಕ್ತನಾಳಗಳ ಆರೋಗ್ಯಕ್ಕೆ ಪ್ರಯೋಜನಕಾರಿ” ಎಂದು ಅವರು ತಿಳಿಸಿದ್ದಾರೆ.
“ಪ್ರಸ್ತುತ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಜನರು ಹಗಲಿನಲ್ಲಿ ಮಾತ್ರ ಕೆಲಸ ಮಾಡುವ ಜನರಿಗೆ ಹೋಲಿಸಿದರೆ ಶೇಕಡಾ 12 ರಷ್ಟು ಎಎಫ್ ನ ಅಪಾಯವನ್ನು ಹೊಂದಿದ್ದಾರೆ. ಜೀವಿತಾವಧಿಯಲ್ಲಿ ರಾತ್ರಿ ಪಾಳಿ ಹೊಂದಿರುವವರಿಗೆ ಹತ್ತು ಅಥವಾ ಹೆಚ್ಚಿನ ವರ್ಷಗಳ ನಂತರ ಅಪಾಯವು 18 ಪ್ರತಿಶತಕ್ಕೆ ಹೆಚ್ಚಾಗಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.
ತಿಂಗಳಿಗೆ ಸರಾಸರಿ ಮೂರರಿಂದ ಎಂಟು ರಾತ್ರಿ ಪಾಳಿಯಲ್ಲಿ ಹತ್ತು ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಕೆಲಸ ಮಾಡಿದ ಜನರಲ್ಲಿ, ಹಗಲಿನ ಕೆಲಸಗಾರರಿಗೆ ಹೋಲಿಸಿದರೆ ಎಎಫ್‌ನ ಅಪಾಯವು ಶೇಕಡಾ 22 ರಷ್ಟು ಹೆಚ್ಚಾಗಿದೆ.