ಬೆಳಗಾವಿ: ನಿನ್ನೆ ಸುದೀರ್ಘ 15 ಗಂಟೆಗಳ ಕಾಲ ವಿಧಾನಸಭೆಯ ಕಲಾಪ ನಡೆಸಲಾಗಿದೆ. ಬೆಳಗ್ಗೆ 10 ಗಂಟೆಗೆ ಆರಂಭವಾದ ಸದನ ತಡರಾತ್ರಿ 12:55 ಕ್ಕೆ ಅಂತ್ಯವಾಗಿದೆ.
ಕೆ.ಜಿ. ಬೋಪಯ್ಯ ಸ್ಪೀಕರ್ ಆಗಿದ್ದಾಗ ಮಧ್ಯರಾತ್ರಿ 1.45 ರವರೆಗೆ ಕಲಾಪ ನಡೆಸಲಾಗಿತ್ತು. ಇದೀಗ ಬೆಳಗಾವಿ ಅಧಿವೇಶನದಲ್ಲಿ ವಿಧಾನಸಭೆಯ ಅಧ್ಯಕ್ಷ ಯು.ಟಿ. ಖಾದರ್ ಮತ್ತೊಂದು ದಾಖಲೆ ನಿರ್ಮಾಣ ಮಾಡಿದ್ದಾರೆ.
ನಿನ್ನೆ ಸುದೀರ್ಘ 15 ಗಂಟೆಗಳ ಕಾಲ ವಿಧಾನಸಭೆ ಕಲಾಪ ನಡೆದಿದ್ದು, ವಿಧಾನಸಭೆ ಮತ್ತು ಜನಪ್ರತಿನಿಧಿಗಳು ಇಚ್ಛಾಶಕ್ತಿ ತೋರಿಸಿದ್ದಾರೆ ಎಂದು ಯು.ಟಿ. ಖಾದರ್ ಹೇಳಿದ್ದಾರೆ. ಶಾಸಕರ ಅಹವಾಲು, ಪ್ರಶ್ನೆಗಳಿಗೆ ಸುದೀರ್ಘ ಅವಕಾಶ ಕಲ್ಪಿಸಲಾಗಿದೆ. ಶಾಸಕರಿಗೆ ಸಮಯ ಸಿಗದೇ ಸದನಕ್ಕೆ ಏಕೆ ಬರಬೇಕು ಎಂದೆನಿಸಿತ್ತು. ಹೀಗಾಗಿ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸುದೀರ್ಘ ಚರ್ಚೆ ನಡೆಸಿದ್ದೇವೆ. ಸುಮಾರು 100 ಶಾಸಕರು ನಿನ್ನೆಯ ಸದನದಲ್ಲಿ ಮಾತನಾಡಿದ್ದಾರೆ. ದಾಖಲೆಗಾಗಿ ನಾವು ಇಷ್ಟೊತ್ತು ವಿಧಾನಸಭೆ ಕಲಾಪ ನಡೆಸಲಿಲ್ಲ. ಜನಪರ ಕಾಳಜಿಯಿಂದ ಚರ್ಚೆ ಮಾಡಿದ್ದೇವೆ ಎಂದು ಖಾದರ್ ತಿಳಿಸಿದ್ದಾರೆ.