ರಾಜ್ಯದಲ್ಲಿ ಕೊರೋಣಾ ಎರಡನೆಯ ಅಲೆ ಆತಂಕವನ್ನುಂಟುಮಾಡಿದೆ. ದಿನೇದಿನೇ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು ಸೋಂಕು ಹೆಚ್ಚಾಗಿ ಕಂಡುಬರುತ್ತಿರುವ 8 ಮಹಾನಗರಗಳಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದೆ.
ನೈಟ್ ಕರ್ಫ್ಯೂ ನಿಂದ ಪ್ರಯೋಜನವಿಲ್ಲ, ರಾತ್ರಿ ಜನ ಸಂಚಾರ ವಿರಳವಾಗಿರುತ್ತದೆ. ಈ ಸಂದರ್ಭದಲ್ಲಿ ಕೊರೋನಾ ಹರಡುವುದಿಲ್ಲ ಎಂದೆಲ್ಲ ಟೀಕೆಗಳು ಕೇಳಿಬರುತ್ತಿವೆ.
ಆದರೆ, ಇದಿನ್ನು ಸ್ಯಾಂಪಲ್ ಮಾತ್ರ. ಸದ್ಯಕ್ಕೆ 8 ನಗರಗಳಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದ್ದು, ಹಂತಹಂತವಾಗಿ ಉಳಿದ ನಗರಗಳಿಗೂ ವಿಸ್ತರಿಸಲಾಗುವುದು. ಉಪ ಚುನಾವಣೆ ಮುಗಿಯುತ್ತಿದ್ದಂತೆ ಕಠಿಣ ನಿಯಮಗಳನ್ನು ಜಾರಿಗೊಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಅಗತ್ಯ ವಸ್ತು ಮತ್ತು ಸೇವೆಗಳಿಗೆ ಮಾತ್ರ ಅನುಮತಿ ನೀಡಿ ಉಳಿದೆಲ್ಲ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ. ಆದರೂ, ಕೆಲವರು ಅನಗತ್ಯವಾಗಿ ಓಡಾಡುವುದರಿಂದ ಕಠಿಣ ನಿಯಮಗಳನ್ನು ಜಾರಿಗೆ ತರಲು ಚಿಂತನೆ ನಡೆದಿದೆ. ಎಲ್ಲ ಸಿದ್ಧತೆ ಮಾಡಿಕೊಂಡು ಉಪ ಚುನಾವಣೆ ಮುಗಿದ ಕೂಡಲೇ ನೈಟ್ ಕರ್ಫ್ಯೂ ಸೇರಿ ಕಠಿಣ ನಿಯಮ ಜಾರಿಯಾಗಬಹುದು ಎಂದು ಹೇಳಲಾಗಿದೆ.