alex Certify ಗಮನಿಸಿ: ರಾಜ್ಯಾದ್ಯಂತ ಇಂದಿನಿಂದ ಟಫ್ ರೂಲ್ಸ್ ಜಾರಿ, ರಾತ್ರಿಯಿಂದಲೇ ನೈಟ್ ಕರ್ಫ್ಯೂ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ: ರಾಜ್ಯಾದ್ಯಂತ ಇಂದಿನಿಂದ ಟಫ್ ರೂಲ್ಸ್ ಜಾರಿ, ರಾತ್ರಿಯಿಂದಲೇ ನೈಟ್ ಕರ್ಫ್ಯೂ

ಬೆಂಗಳೂರು: ಕೊರೋನಾ, ಒಮಿಕ್ರಾನ್ ನಿಯಂತ್ರಣಕ್ಕಾಗಿ ರಾಜ್ಯಾದ್ಯಂತ ಇಂದಿನಿಂದ ಕಠಿಣ ನಿರ್ಬಂಧ ಜಾರಿಗೆ ಬರಲಿದೆ.

ನೈಟ್ ಕರ್ಫ್ಯೂ ಸೇರಿದಂತೆ ಹಲವು ನಿಯಮಗಳನ್ನು ಜಾರಿಗೆ ತರಲಾಗಿದ್ದು, ಡಿಸೆಂಬರ್ 28 ರಿಂದ ಜನವರಿ 7 ರವರೆಗೆ ಪ್ರತಿದಿನ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿರುತ್ತದೆ.

ಡಿಸೆಂಬರ್ 30 ರಿಂದ ಜನವರಿ 4ರ ವರೆಗೆ ಹೋಟೆಲ್, ಬಾರ್, ರೆಸ್ಟೋರೆಂಟ್ ಗಳಲ್ಲಿ ಶೇ. 50 ರಷ್ಟು ಮಾತ್ರ ಅವಕಾಶ ನೀಡಲಾಗಿದೆ.

ರಾತ್ರಿ 10 ಗಂಟೆಗೆ ನೈಟ್ ಕರ್ಫ್ಯೂ ಆರಂಭವಾಗುವುದರಿಂದ 8 ಗಂಟೆಯ ವೇಳೆಗೆ ವ್ಯಾಪಾರ-ವಹಿವಾಟು, ಸಂಚಾರ ಬಂದ್ ಮಾಡಬೇಕಿದೆ. ಇದರಿಂದಾಗಿ ಹೋಟೆಲ್ ಸೇರಿದಂತೆ ಹಲವು ಉದ್ಯಮಗಳಿಗೆ ಹೊಡೆತ ಬೀಳಲಿದೆ.

ಮದುವೆ ಸಮಾರಂಭಗಳಲ್ಲಿ 300 ಕ್ಕಿಂತ ಹೆಚ್ಚು ಜನ ಭಾಗವಹಿಸುವಂತಿಲ್ಲ. ಕೋವಿಡ್ ಸರ್ಟಿಫಿಕೇಟ್ ಕಡ್ಡಾಯವಾಗಿದ್ದು, ರಾತ್ರಿ ಪಾಳಿ ಸಿಬ್ಬಂದಿ, ಪ್ರಯಾಣಿಕರು ಗುರುತಿನ ಚೀಟಿ, ಟಿಕೆಟ್ ತೋರಿಸಬೇಕಿದೆ.

ರಾತ್ರಿ ವೇಳೆ ದೂರದ ಊರುಗಳಿಗೆ ಬಸ್ ಸಂಚಾರ ಇರುತ್ತದೆ. ಪ್ರಯಾಣಿಸುವ ಟಿಕೆಟ್ ತೋರಿಸಿ ಸಂಚರಿಸಬಹುದು.

ಸಾರ್ವಜನಿಕರ ಅನಗತ್ಯ ಓಡಾಟಕ್ಕೆ ನಿರ್ಬಂಧ ಇರುತ್ತದೆ. ಆಸ್ಪತ್ರೆ, ಮೆಡಿಕಲ್, ಕೈಗಾರಿಕೆ, ಸರಕು ಸಾಗಣೆ ವಾಹನ ಸಂಚಾರ, ಅಗತ್ಯ ಸೇವೆಗಗಳಿಗೆ ಅನುಮತಿ ನೀಡಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...