alex Certify ಭಾರತೀಯ ಖಾದ್ಯ ಸವಿದ ನೈಜೀರಿಯಾ ಪ್ರಜೆ ಮಾಡಿದ್ದೇನು ನೋಡಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತೀಯ ಖಾದ್ಯ ಸವಿದ ನೈಜೀರಿಯಾ ಪ್ರಜೆ ಮಾಡಿದ್ದೇನು ನೋಡಿ….!

ಭಾರತೀಯ ಖಾದ್ಯಗಳಿಗೆ ವಿದೇಶದಲ್ಲೂ ಅಭಿಮಾನಿಗಳಿದ್ದಾರೆ ಎಂಬ ಮಾತಲ್ಲಿ ಯಾವುದೇ ಸಂದೇಹವಿಲ್ಲ. ಇದೀಗ ಈ ಮಾತಿಗೆ ಪುಷ್ಟಿ ನೀಡುವಂತಹ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಅಮೆರಿಕದ ಕನೆಕ್ಟಿಕಟ್​ನಲ್ಲಿ ಮೊದಲ ಬಾರಿಗೆ ಭಾರತೀಯ ಖಾದ್ಯ ಸವಿದ ನೈಜಿರಿಯಾ ಪ್ರಜೆ ವ್ಯಕ್ತಪಡಿಸಿದ ಸಂತಸ ಅಷ್ಟಿಷ್ಟಲ್ಲ..!

ಟಕ್ಕರಾ ರೇ ಹಾಗೈ ಲ್ಯಾಂಬೋಗಿನ್ನಿ ದಂಪತಿ ತಮ್ಮ ಇನ್​ಸ್ಟಾಗ್ರಾಂನಲ್ಲಿ ಭಾರತೀಯ ಖಾದ್ಯವನ್ನು ಸವಿದ ವಿಡಿಯೋವನ್ನು ಶೇರ್​ ಮಾಡಿದ್ದಾರೆ. ರೆಸ್ಟಾರೆಂಟ್​ಗೆ ತೆರಳಿದ್ದ ಲ್ಯಾಂಬ್​ಗೆ ಅನ್ನ ಹಾಗೂ ಪರೋಟಾವನ್ನು ನೀಡಲಾಗಿತ್ತು. ಅದರ ಜೊತೆಯಲ್ಲಿ ಗೋವಾ ಮೂಲದ ಕರ್ರಿಯನ್ನು ಕೂಡ ನೀಡಲಾಗಿತ್ತು.

ಮೊದಲು ತಮಗೆ ಸಿಹಿ ತಿನಿಸು ಬೇಕು ಎಂದಿದ್ದ ಲ್ಯಾಂಬ್​ ಬಳಿಕ ಭಾರತೀಯ ಖಾದ್ಯದ ಸವಿಗೆ ಮಾರು ಹೋಗಿದ್ದಾರೆ. ಅಲ್ಲದೇ ನಾನು ಭಾರತೀಯ ಎಂದು ಹೇಳಿಕೊಂಡಿದ್ದಾರೆ. ಹಾಗೂ ಈ ರುಚಿಕರ ತಿನಿಸಿಗೆ ದುಪ್ಪಟ್ಟು ಹಣ ನೀಡೋದಾಗಿ ವಿಡಿಯೋದಲ್ಲಿ ಹೇಳಿದ್ದಾರೆ. ಇದು ಮಾತ್ರವಲ್ಲದೇ ಮತ್ತಷ್ಟು ಭಾರತೀಯ ತಿನಿಸುಗಳನ್ನ ಮನೆಗೆ ಪಾರ್ಸೆಲ್ ರೂಪದಲ್ಲಿ ಕೊಂಡೊಯ್ದಿದ್ದಾರೆ. ಈ ವಿಡಿಯೋ ಇಂಟರ್ನೆಟ್​ನಲ್ಲಿ ವ್ಯಾಪಕ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಗಿದೆ.

https://www.instagram.com/p/CSej59hnwof/?utm_source=ig_web_copy_link

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...