ನವದೆಹಲಿ: ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ(NIFT) ಪ್ರವೇಶ ಪರೀಕ್ಷೆ 2022 ಫಲಿತಾಂಶಗಳನ್ನು ಪ್ರಕಟಿಸಲಾಗಿದೆ.
ಪರೀಕ್ಷೆಯು ಫೆಬ್ರವರಿ 6, 2022 ರಂದು ನಡೆದಿತ್ತು. NIFT ಪ್ರವೇಶ ಪರೀಕ್ಷೆ 2022 ಗೆ ಹಾಜರಾದ ಅಭ್ಯರ್ಥಿಗಳು NIFT ನ ಅಧಿಕೃತ ಸೈಟ್, nift.ac.in ನಲ್ಲಿ ಫಲಿತಾಂಶ ವೀಕ್ಷಿಸಿ ಡೌನ್ ಲೋಡ್ ಮಾಡಬಹುದು.
ಪರಿಶೀಲಿಸುವುದು ಹೇಗೆ? ಇಲ್ಲಿದೆ ಮಾಹಿತಿ:
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ (NIFT) ನ ಅಧಿಕೃತ ಸೈಟ್ ಗೆ ಹೋಗಿ, nift.ac.in.
ಮುಖಪುಟಕ್ಕೆ ಹೋಗಿ ಮತ್ತು ‘ಪ್ರವೇಶ’ ಟ್ಯಾಬ್ ಕ್ಲಿಕ್ ಮಾಡಿ.
ನಿಮ್ಮ ಪ್ರೋಗ್ರಾಂ ಆಯ್ಕೆಮಾಡಿ.
ನಿಮ್ಮ ರೋಲ್ ಸಂಖ್ಯೆ, ಅಪ್ಲಿಕೇಶನ್ ಸಂಖ್ಯೆ ಮತ್ತು ಜನ್ಮ ದಿನಾಂಕ ನಮೂದಿಸಿ.
ನಿಮ್ಮ NIFT ಫಲಿತಾಂಶಗಳು ಪರದೆಯ ಮೇಲೆ ಗೋಚರಿಸುತ್ತವೆ.
ಸೇವ್ ಮಾಡಿ, ಡೌನ್‌ಲೋಡ್ ಮಾಡಿ, ಪ್ರಿಂಟ್ ಔಟ್ ತೆಗೆದುಕೊಳ್ಳಿ.
ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳು niftadmissions.in ಗೆ ಲಾಗಿನ್ ಮಾಡಬೇಕಾಗುತ್ತದೆ. ಮಾರ್ಚ್ 11 ರೊಳಗೆ ಆಯ್ಕೆಗಳನ್ನು ಭರ್ತಿ ಮಾಡಬೇಕಾಗುತ್ತದೆ, ಪ್ರವೇಶ ಕಾರ್ಡ್ ಮಾರ್ಚ್ 16 ರಿಂದ ಡೌನ್‌ಲೋಡ್ ಮಾಡಲು ಲಭ್ಯವಿರುತ್ತದೆ.