
ಬಾಗಲಕೋಟೆ: ನಿಧಿಯಾಸೆಗಾಗಿ ಅತ್ತೆ-ಮಾವ ಸೊಸೆಯನ್ನೇ ಬಲಿ ಕೊಡಲು ಯತ್ನಿಸಿದ್ದ ಆರೋಪ ಕೇಳಿಬಂದಿದೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಯಂಡಿಗೇರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಯಂಡಿಗೇರಿ ಗ್ರಾಮದ ತೋಟದ ಮನೆಯಲ್ಲಿ ಸೊಸೆ ಮುತ್ತಕ್ಕ ಪೂಜಾರಳನ್ನು ಬಲಿಕೊಟ್ಟು ಸಮಾಧಿ ಮಡಲು ಅತ್ತೆ-ಮಾವ ಹಾಗೂ ನಾದಿನಿ ಸೇರಿ ಸಿದ್ಧತೆ ನಡೆಸಿದ್ದರು ಎಂಬ ಆರೋಪ ಕೇಳಿಬಂದಿದೆ.
ಸೊಸೆ ಮುತ್ತಕ್ಕಳನ್ನು ಸಮಾಧಿ ಮಾಡಲೆಂದು ಮನೆಯಲ್ಲಿಯೇ ಐದು ಅಡಿ ಅಗಲ, ಐದು ಅಡಿ ಆಳದ ಗುಂಡಿ ತೋಡಿದ್ದಾರೆ. ಈ ಬಗ್ಗೆ ಸೊಸೆ ಮುತ್ತಕ್ಕ ಸಂಬಂಧಿಕರು ಆರೋಪಿಸಿದ್ದು, ಮುತ್ತಕ್ಕಳನ್ನು ಬಲಿಕೊಡಲು ಅತ್ತೆ-ಮಾವ-ನಾದಿನಿ ತಯಾರಿ ನಡೆಸಿದ್ದರು. ಸಂಬಂಧಿಕರು ಊರಿಗೆ ಬರುವ ವಿಚಾರ ತಿಳಿಯುತ್ತಿದ್ದಂತೆ ಗುಂಡಿಮುಚ್ಚಿದ್ದಾರೆ ಎಂದು ಮುತ್ತಕ್ಕ ಸಹೋದರ ನಾಗರೆಡ್ಡಿ ಆರೋಪಿಸಿದ್ದಾರೆ.ಸಹೋದರನ ದೂರಿನ ಮೇರೆಗೆ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಸಾಂದರ್ಭಿಕ ಚಿತ್ರ