alex Certify T20 ಕ್ರಿಕೆಟ್ ನಲ್ಲಿ ವಿಶ್ವ ದಾಖಲೆ ಬರೆದ ನಿಕೋಲಸ್ ಪೂರನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

T20 ಕ್ರಿಕೆಟ್ ನಲ್ಲಿ ವಿಶ್ವ ದಾಖಲೆ ಬರೆದ ನಿಕೋಲಸ್ ಪೂರನ್

ನಿಕೋಲಸ್ ಪೂರನ್ ಅವರು ಶುಕ್ರವಾರ ರಾತ್ರಿ ಟ್ರಿನಿಡಾಡ್‌ನಲ್ಲಿ T20 ಇತಿಹಾಸ ಬರೆದರು. ಅವರು ಒಂದು ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ರನ್‌ ಗಳನ್ನು ಗಳಿಸಿದ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.

ಮೊಹಮ್ಮದ್ ರಿಜ್ವಾನ್ ಅವರನ್ನು ಹಿಂದಿಕ್ಕಿದ್ದಾರೆ. ಬಾರ್ಬಡೋಸ್ ರಾಯಲ್ಸ್ ವಿರುದ್ಧದ ಸಿಪಿಎಲ್ 2024 ರ ಪಂದ್ಯದಲ್ಲಿ ಟ್ರಿನ್‌ಬಾಗೊ ನೈಟ್ ರೈಡರ್ಸ್(ಟಿಕೆಆರ್) ಗಾಗಿ ಆಡಿದ ಪೂರನ್ ಕೇವಲ 15 ಎಸೆತಗಳಲ್ಲಿ 27 ರನ್ ಗಳಿಸಿ ನವೀನ್ ಉಲ್ ಹಕ್ ಅವರಿಂದ ಔಟಾದರು.

ಪೂರನ್ ಈಗ 2024 ರಲ್ಲಿ T20 ಗಳಲ್ಲಿ 2,059 ರನ್ ಗಳಿಸಿದ್ದಾರೆ. ಪಾಕಿಸ್ತಾನದ ವಿಕೆಟ್ ಕೀಪರ್-ಬ್ಯಾಟರ್ ರಿಜ್ವಾನ್ 2021 ರಲ್ಲಿ 2,036 ರನ್ ಗಳಿಸಿದ್ದರು. T20 ಕ್ರಿಕೆಟ್‌ನಲ್ಲಿ ಕ್ಯಾಲೆಂಡರ್ ವರ್ಷದಲ್ಲಿ 2,000 ಪ್ಲಸ್ ರನ್ ಗಳಿಸಿದ ಇಬ್ಬರು ಬ್ಯಾಟರ್‌ಗಳು ಪೂರನ್ ಮತ್ತು ರಿಜ್ವಾನ್.

ಟಿ20 ಕ್ರಿಕೆಟ್‌ನಲ್ಲಿ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ರನ್

ನಿಕೋಲಸ್ ಪೂರನ್ (WI, DSG, NOS, LSG, TKR, MIE, MINY, RR) – 65 ಇನ್ನಿಂಗ್ಸ್‌ ಗಳಲ್ಲಿ 2059 ರನ್‌ಗಳು(2024)

ಮೊಹಮ್ಮದ್ ರಿಜ್ವಾನ್(ಖೈಬರ್ ಪಖ್ತುನ್ಖ್ವಾ, MS, PAK) – 45 ಇನ್ನಿಂಗ್ಸ್‌ ಗಳಲ್ಲಿ 2036 ರನ್‌ಗಳು(2021)

ಅಲೆಕ್ಸ್ ಹೇಲ್ಸ್(ENG, IU, Notts, THU, TRT) – 61 ಇನ್ನಿಂಗ್ಸ್‌ ಗಳಲ್ಲಿ 1946 ರನ್‌ಗಳು(2022)

ಜೋಸ್ ಬಟ್ಲರ್(ENG, ಲ್ಯಾಂಕ್ಸ್, MNO, PR, RR) – 55 ಇನ್ನಿಂಗ್ಸ್‌ ಗಳಲ್ಲಿ 1833 ರನ್‌ಗಳು(2023)

ಮೊಹಮ್ಮದ್ ರಿಜ್ವಾನ್(ಸಸೆಕ್ಸ್, MS, PAK) – 44 ಇನ್ನಿಂಗ್ಸ್‌ ಗಳಲ್ಲಿ 1817 ರನ್‌ಗಳು(2022)

ಬಾಬರ್ ಅಜಮ್(ಸೆಂಟ್ರಲ್ ಪಂಜಾಬ್, ಕೆಕೆ, ಪಿಎಕೆ) – 43 ಇನ್ನಿಂಗ್ಸ್‌ ಗಳಲ್ಲಿ 1779 ರನ್‌ಗಳು(2021)

ಕ್ರಿಸ್ ಗೇಲ್(BB, JT, REN, RCB, Somerset, WI) – 36 ಇನ್ನಿಂಗ್ಸ್‌ ಗಳಲ್ಲಿ 1665 ರನ್ (2015)

ಶಾನ್ ಮಸೂದ್(MS, ಡರ್ಬಿಶೈರ್, PAK, ಬಲೂಚಿಸ್ತಾನ್) – 53 ಇನ್ನಿಂಗ್ಸ್‌ ಗಳಲ್ಲಿ 1643 ರನ್‌ಗಳು(2022)

ವಿರಾಟ್ ಕೊಹ್ಲಿ(ಆರ್‌ಸಿಬಿ, ಭಾರತ) – 29 ಇನ್ನಿಂಗ್ಸ್‌ ಗಳಲ್ಲಿ 1614 ರನ್(2016)

ಪೂರನ್ ಈಗಾಗಲೇ ಕ್ಯಾಲೆಂಡರ್ ವರ್ಷದಲ್ಲಿ ಟಿ20ಯಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಗಳಿಸಿ ಕ್ರಿಸ್ ಗೇಲ್ ಅವರನ್ನು ಹಿಂದಿಕ್ಕಿದ್ದಾರೆ. ಗೇಲ್ 2015 ರಲ್ಲಿ 135 ಸಿಕ್ಸರ್‌ಗಳನ್ನು ಹೊಂದಿದ್ದರು. ಪೂರನ್ ಒಂದೇ ವರ್ಷದಲ್ಲಿ 150 ಪ್ಲಸ್ ಸಿಡಿಸಿದ ಇತಿಹಾಸದಲ್ಲಿ ಮೊದಲ ಆಟಗಾರರಾದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...