alex Certify ನಕಲಿ ದಾಖಲೆ ನೀಡಿ ಆಧಾರ್ ಪಡೆದ ಬಾಂಗ್ಲಾದೇಶದ 12 ಜನ: ಪರಿಶೀಲನೆಗೆ ಹೈಕೋರ್ಟ್ ಅಸ್ತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಕಲಿ ದಾಖಲೆ ನೀಡಿ ಆಧಾರ್ ಪಡೆದ ಬಾಂಗ್ಲಾದೇಶದ 12 ಜನ: ಪರಿಶೀಲನೆಗೆ ಹೈಕೋರ್ಟ್ ಅಸ್ತು

ಬೆಂಗಳೂರು: 12 ಬಾಂಗ್ಲಾ ಮೂಲದವರ ಆಧಾರ್ ಕಾರ್ಡ್ ಪರಿಶೀಲನೆಗೆ ಹೈಕೋರ್ಟ್ ಅಸ್ತು ಎಂದಿದೆ. ದಾಖಲೆಗಳನ್ನು ಪರಿಶೀಲಿಸಲು ಎನ್ಐಎಗೆ ಹೈಕೋರ್ಟ್ ನಿಂದ ಅನುಮತಿ ನೀಡಲಾಗಿದೆ.

ಬಾಂಗ್ಲಾದೇಶದ 12 ಜನರು ಆಧಾರ್ ಕಾರ್ಡ್ ಪಡೆದುಕೊಂಡಿದ್ದರು. ಆಧಾರ್ ಕಾರ್ಡ್ ಪಡೆದುಕೊಳ್ಳಲು ಅವರು ನಕಲಿ ದಾಖಲೆಗಳನ್ನು ಸಲ್ಲಿಸಿರುವುದಾಗಿ ಎನ್ಐಎ ಆರೋಪಿಸಿತ್ತು. ಎನ್ಐಎಗೆ ದಾಖಲೆ ನೀಡಲು ಯುಐಡಿಎಐ ನಿರಾಕರಿಸಿತ್ತು.

ಹೀಗಾಗಿ ಎನ್ಐಎ ವತಿಯಿಂದ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಲಾಗಿತ್ತು. ವಿಚಾರಣೆ ಅಲಿಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠದಿಂದ ಬಾಂಗ್ಲಾ ಮೂಲದವರ ಆಧಾರ್ ಕಾರ್ಡ್ ಪರಿಶೀಲನೆಗೆ ಆದೇಶ ನೀಡಲಾಗಿದೆ ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...