ಮುಂಬೈ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಆಪ್ತರಿಗೆ ಸೇರಿದ 20 ಸ್ಥಳಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ(NIA) ದಾಳಿ ನಡೆಸಿದೆ. ಮುಂಬೈನ 20 ಸ್ಥಳಗಳಲ್ಲಿ ದಾವೂದ್ ಇಬ್ರಾಹಿಂನ ಸಹಚರರ ಮೇಲೆ ದಾಳಿ ನಡೆಸಿ ಪರಿಶೀಲಿಸಲಾಗಿದೆ.
ಶಾರ್ಪ್ ಶೂಟರ್ ಗಳು, ಮಾದಕವಸ್ತು ಕಳ್ಳಸಾಗಣೆದಾರರು, ಹವಾಲಾ ಆಪರೇಟರ್‌ಗಳು, ದಾವೂದ್ ಇಬ್ರಾಹಿಂನ ರಿಯಲ್ ಎಸ್ಟೇಟ್ ಮ್ಯಾನೇಜರ್‌ಗಳು ಮತ್ತು ಕ್ರಿಮಿನಲ್ ಸಿಂಡಿಕೇಟ್ ನ ಇತರ ಪ್ರಮುಖರ ವಿರುದ್ಧ ಬಾಂದ್ರಾ, ನಾಗ್ಪಾಡಾ, ಬೊರಿವಲಿ, ಗೋರೆಗಾಂವ್, ಪರೇಲ್, ಸಾಂತಾಕ್ರೂಜ್‌ನಲ್ಲಿ ದಾಳಿ ನಡೆಸಲಾಗಿದೆ.
ಡಿ ಕಂಪನಿಯ ಉನ್ನತ ನಾಯಕರು, ಸಹಚರರು, ವಿದೇಶದಲ್ಲಿ ನೆಲೆಸಿರುವ ಅನೇಕರು, ಭಯೋತ್ಪಾದನಾ ಚಟುವಟಿಕೆಗಳು, ಮತ್ತು ಭಾರತದಲ್ಲಿ ಅಶಾಂತಿ ಸೃಷ್ಟಿಸುವ ಕೃತ್ಯಗಳಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ಈ ವರ್ಷದ ಫೆಬ್ರವರಿಯಲ್ಲಿ ಎನ್‌ಐಎ ಪ್ರಕರಣ ದಾಖಲಿಸಿದೆ.
ಪಾಕಿಸ್ತಾನದ ಕರಾಚಿಯಲ್ಲಿರುವ ತನ್ನ ನೆಲೆಯಿಂದ ದಾವೂದ್ ಇಬ್ರಾಹಿಂ ನಡೆಸುತ್ತಿರುವ ಭೂಗತ ಜಾಲದ ಸದಸ್ಯರು ನಡೆಸಿದ ಕ್ರಿಮಿನಲ್ ಮತ್ತು ಭಯೋತ್ಪಾದಕ ಕೃತ್ಯಗಳ ಸಂಪೂರ್ಣ ಮಾಹಿತಿಗಳನ್ನು NIA ಮೇಲ್ವಿಚಾರಣೆ ಮಾಡಿ ತನಿಖೆ ನಡೆಸುತ್ತಿದೆ. ಇದರ ಭಾಗವಾಗಿ ದಾಳಿ ನಡೆಸಲಾಗಿದೆ.