ಮುಂಬೈ: ಉದ್ಯಮಿ ಮುಖೇಶ್ ಅಂಬಾನಿ ಮನೆ ಬಳಿ ಸ್ಪೋಟಕಗಳನ್ನು ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಾಯಕ ಪೊಲೀಸ್ ಇನ್ಸ್ ಪೆಕ್ಟರ್ ಸಚಿನ್ ವಜೆ ಅವರನ್ನು ಬಂಧಿಸಲಾಗಿದೆ.
ಮುಕೇಶ್ ಅಂಬಾನಿಯ ಆಂಟಾನಿಯಾ ನಿವಾಸದ ಬಳಿ ಸ್ಪೋಟಕ ಇಟ್ಟಿದ್ದ ಪ್ರಕರಣದಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಸಚಿನ್ ವಜೆ ಅವರನ್ನು ಮುಂಬೈ ಪೊಲೀಸರು ವಿಚಾರಣೆ ನಡೆಸಿದ ನಂತರ ತಡರಾತ್ರಿ ರಾಷ್ಟ್ರೀಯ ತನಿಖಾ ಸಂಸ್ಥೆ ಬಂಧಿಸಿದೆ.
ಮುಂಬೈ ಪೋಲಿಸ್ ಅಪರಾಧ ವಿಭಾಗದ ಗುಪ್ತಚರ ಘಟಕದ ವಿಶೇಷ ಶಾಖೆಯಲ್ಲಿ ಸಚಿನ್ ಅವರ ವಿಚಾರಣೆ ನಡೆಸಲಾಗಿದೆ. ಫೆಬ್ರವರಿ 25 ರಂದು ಮುಖೇಶ್ ಅಂಬಾನಿ ನಿವಾಸದ ಎದುರು ಸ್ಪೋಟಕಗಳು ತುಂಬಿದ್ದ ಕಾರ್ ಪತ್ತೆಯಾಗಿತ್ತು. ಈ ಪ್ರಕರಣದಲ್ಲಿ ತಪ್ಪೊಪ್ಪಿಗೆ ನೀಡಿದ ಸಚಿನ್ ರನ್ನು ಎನ್ಐಎ ಬಂಧಿಸಿದೆ.
ಜಗತ್ತಿಗೆ ವಿದಾಯ ಹೇಳುವ ಸಮಯ ಹತ್ತಿರ ಬರುತ್ತಿದೆ. 2004 ರಲ್ಲಿ ಸುಳ್ಳು ಪ್ರಕರಣದಲ್ಲಿ ನನ್ನನ್ನು ಸಿಐಡಿ ಅಧಿಕಾರಿಗಳು ನನ್ನನ್ನು ಬಂಧಿಸಿದ್ದರು. ಇತಿಹಾಸ ಪುನರಾವರ್ತನೆಯಾಗಲಿದೆ ಎಂದು ವಿಚಾರಣೆಗೆ ಹೋಗುವ ಮೊದಲು ಸಾಮಾಜಿಕ ಜಾಲತಾಣದಲ್ಲಿ ಸಚಿನ್ ಪೋಸ್ಟ್ ಹಾಕಿದ್ದಾರೆ.