ನವದೆಹಲಿ: ಉತ್ತರ ಭಾರತದ ಕುಖ್ಯಾತ 15 ಕ್ರಿಮಿನಲ್ ಗಳನ್ನು ಅಂಡಮಾನ್ ಜೈಲಿಗೆ ಕಳುಹಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.
ಎನ್ಐಎ ವತಿಯಿಂದ ಕ್ರಿಮಿನಲ್ ಗಳು ಮತ್ತು ಪಾತಕಿಗಳ ಸ್ಥಳಾಂತರಕ್ಕೆ ಮನವಿ ಸಲ್ಲಿಸಿದ್ದು, ಕೇಂದ್ರ ಗೃಹ ಸಚಿವಾಲಯ ಒಪ್ಪಿಗೆ ನೀಡಿದೆ. ಶಿಕ್ಷೆಗೊಳಗಾದ ಕ್ರಿಮಿನಲ್ ಗಳನ್ನು ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಜೈಲಿಗೆ ಕಳುಹಿಸಲು ನಿರ್ಧಾರ ಕೈಗೊಳ್ಳಲಾಗಿದೆ.
ಕ್ರಿಮಿನಲ್ ಸಿಂಡಿಕೇಟ್ ಗಳನ್ನು ಜೈಲುಗಳೊಳಗಿಂದ ನಡೆಸುತ್ತಿರುವ ಶಂಕೆಯ ಮೇರೆಗೆ ಪ್ರಸ್ತುತ ದೆಹಲಿ, ಪಂಜಾಬ್ ಮತ್ತು ಹರಿಯಾಣ ಜೈಲುಗಳಲ್ಲಿ ಬಂಧಿಯಾಗಿರುವ 10-12 ದರೋಡೆಕೋರರನ್ನು ವರ್ಗಾವಣೆ ಮಾಡುವ ಕುರಿತು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಗೃಹ ಸಚಿವಾಲಯಕ್ಕೆ ಮನವಿ ಮಾಡಿತ್ತು.
ಉತ್ತರ ಭಾರತದ ಜೈಲಿನಲ್ಲಿರುವ 25 ದರೋಡೆಕೋರರನ್ನು ದಕ್ಷಿಣ ರಾಜ್ಯಗಳಿಗೆ ವರ್ಗಾಯಿಸುವಂತೆ ಎನ್‌ಐಎ ಈ ಹಿಂದೆ ಗೃಹ ಸಚಿವಾಲಯಕ್ಕೆ ಮನವಿ ಮಾಡಿತ್ತು. ಈಗ ಅಂಡಮಾನ್ ಜೈಲಿಗೆ ಸ್ಥಳಾಂತರಕ್ಕೆ ನಿರ್ಧರಿಸಲಾಗಿದೆ.