ನವದೆಹಲಿ: ಟೋಲ್ ಗೇಟ್ ಗಳಲ್ಲಿ ವಾಹನಗಳ ಉದ್ದದ ಸರದಿ ಸಾಮಾನ್ಯ. ಹಣ ಕೊಡಲು ಕಾಯುವ ದುಃಸ್ಥಿತಿಯ ಬಗ್ಗೆ ಜನ ಶಪಿಸುವುದು ಸಾಮಾನ್ಯ. ಇದನ್ನು ತಪ್ಪಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಫಾಸ್ಟ್ಯಾಗ್ ವ್ಯವಸ್ಥೆ ಜಾರಿಗೆ ತಂದಿದೆ. ಈಗ ಮತ್ತೊಂದು ವ್ಯವಸ್ಥೆಯನ್ನು ಜಾರಿಗೆ ತರಲು ಎನ್ಎಚ್ಎಐ ಮುಂದಾಗಿದೆ.
ಟೋಲ್ ಗೇಟ್ ಗಳಿಂದ ಕಿ.ಮೀ.ಗಳಷ್ಟು ಹಿಂದಿನಿಂದಲೇ ಹೆದ್ದಾರಿಯಲ್ಲಿ ಪ್ರತ್ಯೇಕ ಬಣ್ಣ ಬಳಿದು ವಾಹನಗಳು ಅಲ್ಲಿಂದಲೇ ಸರದಿಯಲ್ಲಿ ಆಗಮಿಸಲು ಅನುಕೂಲವಾಗುವಂತೆ ಮಾಡಲಿದೆ. ಈ ಕುರಿತು ಯೋಜನೆ ಸಿದ್ಧವಾಗಿದೆ ಎಂದು ಮೂಲಗಳು ತಿಳಿಸಿವೆ.
ಪಿಂಚಣಿ, ಸಣ್ಣ ಉಳಿತಾಯ ಯೋಜನೆ ಬಗ್ಗೆ ಮೋದಿ ಸರ್ಕಾರದಿಂದ ಮಹತ್ವದ ನಿರ್ಧಾರ –ಖಾಸಗಿ ಬ್ಯಾಂಕ್ ಗಳಿಗೆ ಅವಕಾಶ
ರಾಷ್ಟ್ರೀಯ ಹೆದ್ದಾರಿ ಮಂತ್ರಾಲಯ ಟೋಲ್ ಫ್ಲಾಜಾಗಳ ಸುಧಾರಣೆ ಸಂಬಂಧ ನಿರಂತರ ಮೇಲುಸ್ತುವಾರಿ ವಹಿಸುತ್ತಿದೆ. ಅದರ ಸೂಚನೆಯಂತೆ ಪ್ರಾಧಿಕಾರ ಫ್ಯಾಸ್ಟ್ಯಾಗ್ ಕಡ್ಡಾಯ ಮಾಡಿತ್ತು.