ಹೈದರಾಬಾದ್: ಕೊರೋನಾ ಮೂರನೆಯ ಅಲೆ ಇಳಿಮುಖವಾಗುತ್ತಿರುವ ಹೊತ್ತಲ್ಲೇ ಮತ್ತೊಂದು ಆತಂಕದ ಸುದ್ದಿ ಬಂದಿದೆ. ಕೊರೋನಾ ನಾಲ್ಕನೆಯ ಅಲೆ ಜೂನ್ ನಲ್ಲಿ ಬರಲಿದೆ ಎಂದು ಐಐಟಿ ಕಾನ್ಪುರ ತಜ್ಞರ ತಂಡ ಹೇಳಿದೆ.
ಜೂನ್ ಅಂತ್ಯದ ವೇಳೆಗೆ ದೇಶದಲ್ಲಿ ಕೊರೋನಾ ನಾಲ್ಕನೇ ಅಲೆ ಅಪ್ಪಳಿಸುವ ಸಾಧ್ಯತೆಯಿದೆ ಎಂದು ತಜ್ಞರು ಹೇಳಿದ್ದಾರೆ. ನಾಲ್ಕನೆಯ ಅಲೆಯಲ್ಲಿ ರೂಪಾಂತರವಾಗುವ ತಳಿಗಳು, ಅವುಗಳ ತೀವ್ರತೆ, ಲಸಿಕೆ ವಿತರಣೆಯ ಸ್ಥಿತಿಗತಿ ಮೊದಲಾದವುಗಳ ಆಧರಿಸಿ 4 ನೇ ಅಲೆ ಪರಿಣಾಮ ಉಂಟಾಗಲಿದೆ ಎನ್ನಲಾಗಿದೆ.
ಐಐಟಿ ಕಾನ್ಪುರದ ತಜ್ಞರಾದ ಎಸ್.ಪಿ. ರಾಜೇಶ್ವರಿ ಭಾಯಿ, ಶುಭ್ರಾ ಶಂಕರ್ ಧರ, ಶಲಭ್ ಅವರ ತಂಡ ಬೂಟ್ ಸ್ಟ್ರಾಪ್ ಸಾಂಖ್ಯಿಕ ಮಾದರಿ ಆಧರಿಸಿ ವರದಿ ತಯಾರಿಸಿದ್ದಾರೆ.
ಭಾರತವು ಜೂನ್ ಮಧ್ಯದಿಂದ ಅಂತ್ಯದವರೆಗೆ ನಾಲ್ಕನೇ ಕೋವಿಡ್ ತರಂಗಕ್ಕೆ ಸಾಕ್ಷಿಯಾಗುವ ಸಾಧ್ಯತೆಯಿದೆ ಮತ್ತು ಉಲ್ಬಣವು ಸುಮಾರು 4 ತಿಂಗಳವರೆಗೆ ಮುಂದುವರಿಯುತ್ತದೆ ಎಂದು ಐಐಟಿ ಕಾನ್ಪುರದ ವಿಜ್ಞಾನಿಗಳ ತಂಡವು ಇತ್ತೀಚಿನ ಅಧ್ಯಯನವನ್ನು ಸೂಚಿಸಿದೆ. ಆದಾಗ್ಯೂ, ತೀವ್ರತೆಯು ರೂಪಾಂತರದ ಸ್ವರೂಪ, ದೇಶಾದ್ಯಂತ ವ್ಯಾಕ್ಸಿನೇಷನ್ ಸ್ಥಿತಿಯನ್ನು ಅವಲಂಬಿಸಿರುತ್ತದೆ ಎನ್ನಲಾಗಿದೆ.