
ಕೆಲ ಸಮಯದ ಬಳಿಕ ಪ್ರತಿಭಟನಾಕಾರರನ್ನು ಚದುರಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವಲ್ಲಿ ಅಧಿಕಾರಿಗಳು ಯಶಸ್ವಿಯಾದರಾದರೂ ಸಹ ಇದರಿಂದ ಕೆಲವು ಗಂಟೆಗಳ ಕಾಲ ವಿಮಾನ ಕಾರ್ಯಾಚರಣೆ ಸ್ಥಗಿತಗೊಂಡಿತ್ತು.
ಬರ್ಲಿನ್ನಿಂದ ವೈರಲ್ ಆಗಿರುವ ಮತ್ತೊಂದು ವಿಡಿಯೋದಲ್ಲಿ ಪ್ರತಿಭಟನಾಕಾರರ ಪೈಕಿ ಇಬ್ಬರು ಕಾಂಕ್ರಿಟ್ ಹಾಗೂ ಎಪಾಕ್ಸಿ ರಾಳದ ಮಿಶ್ರಣವನ್ನು ಬಳಕೆ ಮಾಡಿಕೊಂಡು ತಮ್ಮ ಕೈಗಳನ್ನು ರಸ್ತೆಗೆ ಅಂಟಿಸಿಕೊಂಡಿದ್ದಾರೆ. ಇವರ ಕೈಗಳನ್ನು ಕತ್ತರಿಸಿ ತೆಗೆಯಬೇಕಾಗಿ ಬರಬಹುದು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.