ಕೇರಳದ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳ ನೃತ್ಯಕ್ಕೆ ವಿಶ್ವಸಂಸ್ಥೆಯ ಪ್ರತಿನಿಧಿ ಶ್ಲಾಘಿಸಿದ್ದಾರೆ. ಸಾಂಸ್ಕೃತಿಕ ಹಕ್ಕುಗಳ ವಿಶೇಷ ವರದಿಗಾರ್ತಿ ಕರಿಮಾ ಬೆನ್ನೌನೆ, ತ್ರಿಶೂರ್ ಸರ್ಕಾರಿ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಾದ ನವೀನ್ ರಜಾಕ್ ಮತ್ತು ಜಾನಕಿ ಓಂಕುಮಾರ್ ಅವರು ಮಾಡಿರುವ ನೃತ್ಯದ ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಮತ್ತು ಮಾನವೀಯ ಸಮಸ್ಯೆಗಳ ಕುರಿತು ವ್ಯವಹರಿಸುವ ಸಾಮಾನ್ಯ ಸಭೆಯ ಮೂರನೇ ಸಮಿತಿಯ ಅನೌಪಚಾರಿಕ ಸಭೆಯಲ್ಲಿ ಬೆನೌನ್, ಈ ವಿಡಿಯೋವು ಪ್ರತಿಯೊಬ್ಬರ ಸಾಂಸ್ಕೃತಿಕ ಹಕ್ಕುಗಳನ್ನು ಹೆಚ್ಚಿಸುವ ಸೃಜನಶೀಲ ಮಾರ್ಗವನ್ನು ಸೂಚಿಸಿದೆ ಎಂದು ಹೇಳಿದ್ದಾರೆ.
ಇನ್ನು ಸಾಂಸ್ಕೃತಿಕ ಮಿಶ್ರಣವನ್ನು ಸಾಮಾನ್ಯವಾಗಿ ಆಕ್ರಮಣಕ್ಕೆ ಒಳಗಾಗುವ ಜಗತ್ತಿನಲ್ಲಿ ನಾವು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಕೂಡ ಬೆನೌನ್ ಹೇಳಿದ್ದಾರೆ.
ಕೇರಳದ ತ್ರಿಶೂರ್ ನ ರಜಾಕ್ ಮತ್ತು ಓಂಕುಮಾರ್, ತ್ರಿಶೂರ್ ಸರ್ಕಾರಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ. ಇವರು ಯೂರೋ-ಕೆರಿಬಿಯನ್ ಪಾಪ್ ಗ್ರೂಪ್ ಬೋನಿ ಎಂ ಅವರ ‘ರಾಸ್‌ಪುಟಿನ್’ಗೆ ವೈದ್ಯಕೀಯ ಸ್ಕ್ರಬ್‌ನಲ್ಲಿ ನೃತ್ಯ ಮಾಡಿದ್ದರು. ಇದು ಏಪ್ರಿಲ್‌ನಲ್ಲಿ ವೈರಲ್ ಆಗಿತ್ತು.