
ಸಮಾಜವಾದಿ ಅತ್ತರ್ ಸುಗಂಧ ದ್ರವ್ಯವು 22 ನೈಸರ್ಗಿಕ ಪರಿಮಳಗಳಿಂದ ಮಾಡಲ್ಪಟ್ಟಿದೆ ಮತ್ತು ಇದು ಕೆಂಪು ಮತ್ತು ಹಸಿರು ಬಣ್ಣದ ಬಾಟಲಿಗಳನ್ನು ಹೊಂದಿದೆ. ಎಂಎಲ್ಸಿ ಪಮ್ಮಿ ಜೈನ್ ಅವರು ಈ ಸುಗಂಧವನ್ನು ಸಿದ್ಧಪಡಿಸಿದ್ದಾರೆ. ಹಾಗೂ ಇದು ಇತರೆ ಸುಗಂಧ ದ್ರವ್ಯಗಳಿಗಿಂತ ಹೆಚ್ಚು ಕಾಲ ಪರಿಮಳ ಉಳಿಯುತ್ತದೆ ಎಂದು ಪಕ್ಷ ತಿಳಿಸಿದೆ.
ಜನರು ಸಮಾಜವಾದಿ ಅತ್ತರ್ ಸುಗಂಧ ದ್ರವ್ಯವನ್ನು ಬಳಸಿದಾಗ, ಅವರು ಸಮಾಜವಾದವನ್ನು ಸ್ಮೆಲ್ ಮಾಡುತ್ತಾರೆ. 2022 ರಲ್ಲಿ ಈ ಸುಗಂಧ ದ್ರವ್ಯವು ದ್ವೇಷವನ್ನು ಕೊನೆಗೊಳಿಸುತ್ತದೆ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ. ಸುಗಂಧ ದ್ರವ್ಯದ ಬಾಟಲಿಯಲ್ಲಿ ಸಮಾಜವಾದಿ ಪಕ್ಷದ ಚಿಹ್ನೆ ಮತ್ತು ಅಖಿಲೇಶ್ ಯಾದವ್ ಅವರ ಚಿತ್ರವಿದೆ.
ಕನೌಜ್ನ ಸಮಾಜವಾದಿ ಪಕ್ಷದ ನಾಯಕ ಮತ್ತು ಉತ್ತರ ಪ್ರದೇಶದ ಎಂಎಲ್ಸಿ ಪುಷ್ಪರಾಜ್ ಜೈನ್ ಅವರು ಪಕ್ಷದ ಇತರ ಸದಸ್ಯರೊಂದಿಗೆ ಸಮಾಜವಾದಿ ಅತ್ತರ್ ಅನ್ನು ಉದ್ಘಾಟಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ. ಆದರೆ, ಸಮಾಜವಾದಿ ಪಕ್ಷವು ಈಗಾಗಲೇ ಅಕ್ಟೋಬರ್ 12 ರಂದು ವಿಜಯ್ ರಥ ಯಾತ್ರೆ ಮೂಲಕ ತನ್ನ ಪ್ರಚಾರವನ್ನು ಪ್ರಾರಂಭಿಸಿದೆ.
ಇನ್ನು ಸುಗಂಧ ದ್ರವ್ಯವನ್ನು ಬಿಡುಗಡೆ ಮಾಡುವ ಮೂಲಕ ಪಕ್ಷವು ಜನರ ಬೆಂಬಲವನ್ನು ಪಡೆಯಲು ಪ್ರಯತ್ನಿಸುತ್ತಿರುವುದು ಇದೇ ಮೊದಲಲ್ಲ. 2016 ರಲ್ಲಿ ಸಮಾಜವಾದಿ ಪಕ್ಷವು ಸಮಾಜವಾದಿ ಸುಗಂಧ್ ಎಂಬ ಸುಗಂಧ ದ್ರವ್ಯಗಳನ್ನು ಬಿಡುಗಡೆ ಮಾಡಿತ್ತು.