
ಆದರೆ ಜನರಿಗೆ ಸುದ್ದಿ ಮುಟ್ಟಿಸಬೇಕಾದ ನ್ಯೂಸ್ ಚಾನೆಲ್ಗಳಲ್ಲೂ ಒಮ್ಮೊಮ್ಮೆ ಎಡವಟ್ಟು ಆಗುವುದುಂಟು. ಇದೇ ಮಾತಿಗೆ ಉದಾಹರಣೆ ಎಂಬಂತೆ ಅಮೆರಿಕದ ನ್ಯೂಸ್ ಚಾನೆಲ್ ಒಂದರಲ್ಲಿ ನಿರೂಪಕಿ ಹವಾಮಾನ ವರದಿ ನೀಡುತ್ತಿದ್ದ ವೇಳೆ ಟಿವಿ ಪರದೆಯ ಮೇಲೆ ಇದ್ದಕ್ಕಿದ್ದಂತೆ ನೀಲಿ ಚಿತ್ರ ಪ್ರದರ್ಶನವಾಗಿದೆ..!
ಆದರೆ ಇದರ ಬಗ್ಗೆ ಪರಿವೆ ಇಲ್ಲದ ನಿರೂಪಕಿ ಹವಾಮಾನ ವರದಿ ನೀಡುತ್ತಲೇ ಇದ್ದರು. ಕೆಲ ಕ್ಷಣದ ಬಳಿಕ ವಿಡಿಯೋವನ್ನು ಬಂದ್ ಮಾಡಲಾಗಿದೆ. ಆದರೆ ಅಷ್ಟರಲ್ಲಾಗಲೇ ಈ ದೃಶ್ಯಾವಳಿಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಬಿಟ್ಟಿದೆ.
KREM ನ್ಯೂಸ್ ಚಾನೆಲ್ನ ನಿರೂಪಕಿ ಕೋಡಿ ಪ್ರೊಕ್ಟೋರ್ ಹವಾಮಾನ ವರದಿ ನೀಡುತ್ತಿದ್ದರು. ಆದರೆ ಅಚಾನಕ್ಕಾಗಿ ಪೋರ್ನ್ ವಿಡಿಯೋ ಪ್ರಸಾರವಾಗಿದೆ. ಇದರ ಬಗ್ಗೆ ಐಡಿಯಾ ಇಲ್ಲದ ನಿರೂಪಕಿ ತಮ್ಮ ಕೆಲಸ ಮುಂದುವರಿಸಿದ್ದರು. ಆದರೆ ಈ ಬಗ್ಗೆ ಅರಿವಿಗೆ ಬರುತ್ತಿದ್ದಂತೆಯೇ ನಿರೂಪಕಿ ಶಾಕ್ ಆಗಿದ್ದಾರೆ. ಈ ಸಂಬಂಧ ನಿರೂಪಕಿ ಕ್ಷಮೆಯಾಚಿಸಿದ್ದಾರೆ .