ಮದುವೆ ಕಾರ್ಯಕ್ರಮದ ಬಳಿಕ ನವದಂಪತಿ ಹನಿಮೂನ್ಗೆ ತೆರಳೋದು ಹೊಸ ವಿಷಯವೇನಲ್ಲ. ಆದರೆ ಇಲ್ಲೊಂದು ನವದಂಪತಿ ಮದುವೆ ಬಳಿಕ ಹನಿಮೂನ್ಗೆ ತೆರಳೋದು ಬಿಟ್ಟು ಮದುವೆ ಕಾರ್ಯಕ್ರಮದಲ್ಲಿ ಬಂದ ಅತಿಥಿಗಳು ಎಷ್ಟೆಷ್ಟು ತಿಂದಿದ್ದಾರೆ ಎಂಬುದನ್ನು ತಿಳಿಯಲು ಸಿಸಿ ಕ್ಯಾಮರಾ ಪರಿಶೀಲಿಸಿದ್ದಾರೆ..!
ಇಷ್ಟಾಗಿದ್ದರೂ ಪರ್ವಾಗಿರಲಿಲ್ಲ. ಆದರೆ ಈ ದಂಪತಿ ಮದುವೆ ದಿನ ಹೆಚ್ಚುವರಿ ಕೇಕ್ ಪೀಸ್ ತಿಂದ ಕಾರಣಕ್ಕೆ ಅತಿಥಿಗಳಿಗೆ 366 ರೂಪಾಯಿ ಪಾವತಿಸುವಂತೆ ಹೇಳಿದ್ದಾರೆ.
ನವದಂಪತಿ ಕಳಿಸಿರುವ ಮೆಸೇಜ್ನ ಸ್ಕ್ರೀನ್ಶಾಟ್ನ್ನು ಅತಿಥಿಯೊಬ್ಬರು ರೆಡಿಟ್ನಲ್ಲಿ ಶೇರ್ ಮಾಡಿದ್ದಾರೆ. ದಂಪತಿಯ ಈ ಪ್ರಶ್ನೆಯಿಂದ ತಬ್ಬಿಬ್ಬಾದ ಅತಿಥಿ ‘ನೀವೇನು ಹೇಳ್ತಿದ್ದೀರಿ..?’ ಎಂದು ಪ್ರಶ್ನೆ ಮಾಡಿರೋದನ್ನು ಚಾಟ್ನಲ್ಲಿ ಕಾಣಬಹುದಾಗಿದೆ.
ನಾವು ಮದುವೆ ದಿನದ ಸಿಸಿ ಕ್ಯಾಮರಾವನ್ನು ಪರಿಶೀಲಿಸುತ್ತಿದ್ದೆವು. ಅದರಲ್ಲಿ ನೀವು 2 ಕೇಕ್ಗಳನ್ನು ತಿಂದಿದ್ದನ್ನು ನೋಡಿದ್ದೇವೆ. ನೀವು ಒಂದೇ ಕೇಕ್ ಪೀಸ್ ತಿನ್ನಬೇಕಿತ್ತು. ಆದರೆ ಎರಡನ್ನು ತಿಂದಿದ್ದರಿಂದ 1 ಕೇಕ್ ಪೀಸ್ನ ದರವನ್ನು ಪಾವತಿಸಬೇಕು. ಹೀಗಾಗಿ ನೀವು ದಯಮಾಡಿ 366 ರೂಪಾಯಿ ಪಾವತಿಸಲು ಸಾಧ್ಯವೇ..? ಎಂದು ದಂಪತಿ ಕೇಳಿದ್ದಾರೆ. ನವಜೋಡಿಯ ಈ ಹುಚ್ಚಾಟ ಕಂಡು ನೆಟ್ಟಿಗರಂತೂ ತಬ್ಬಿಬ್ಬಾಗಿದ್ದಾರೆ.