ಉತ್ತರ ಪ್ರದೇಶದ ಮೀರತ್ ನಗರದಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ಗ್ಯಾಸ್ ಗೀಸರ್ ಸೋರಿಕೆಯಾಗಿ ನವ ವಧು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ಮಹಿಳೆ ಸ್ನಾನ ಮಾಡಲು ತನ್ನ ಅತ್ತೆಯ ಮನೆಯಲ್ಲಿ ಸ್ನಾನಗೃಹ ಪ್ರವೇಶಿಸಿದ್ದಳು. ಸ್ವಲ್ಪ ಸಮಯದವರೆಗೆ ಆಕೆ ಸ್ನಾನಗೃಹದಲ್ಲೇ ಇದ್ದಳು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಸ್ವಲ್ಪ ಸಮಯದ ನಂತರ ಅನುಮಾನಗೊಂಡ ಕುಟುಂಬಸ್ಥರು ಆಕೆಯನ್ನು ಕೂಗಿದಾಗ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ನಂತರ ಬಾತ್ ರೂಂ ಪ್ರವೇಶಿಸಿದ ಕುಟುಂಬಸ್ಥರಿಗೆ ಆಕೆ ಮೂಲೆಯಲ್ಲಿ ಪ್ರಜ್ಞಾಹೀನಳಾಗಿ ಬಿದ್ದಿದ್ದನ್ನ ಕಂಡಿದ್ದಾರೆ.
ನಂತರ ತಕ್ಷಣ ಆಕೆಯನ್ನು ಆಸ್ಪತ್ರೆಗೆ ಸಾಗಿಸಿದ್ರೂ ದಾರಿ ಮಧ್ಯೆಯೇ ಆಕೆ ಸಾವನ್ನಪ್ಪಿದ್ದಾಳೆಂದು ವೈದ್ಯರು ಘೋಷಿಸಿದ್ರು.