ಹೊಸದಾಗಿ ಮದುವೆಯಾದ ಆಂಧ್ರ ಪ್ರದೇಶದ ದಂಪತಿಗಳಿಬ್ಬರು ಕಾಕಿನಾಡಾದಲ್ಲಿರುವ ಜವಾಹರಲಾಲ್ ನೆಹರೂ ತಾಂತ್ರಿಕ ವಿವಿಯ ಅತಿಥಿಗೃಹದಲ್ಲಿ ಹನಿಮೂನ್ ಮಾಡಿದ್ದು ಭಾರೀ ಟೀಕೆಗೆ ಗ್ರಾಸವಾಗಿದ್ದಾರೆ.
ಘಟನೆ ಸಂಬಂಧ ತನಿಖೆ ನಡೆಸಲು ವಿವಿಯ ಆಡಳಿತ ಮಂಡಳಿ ಆದೇಶಿಸಿದೆ. ಪುಷ್ಪಾಲಂಕಾರದಿಂದ ಸಿಂಗರಿಸಲ್ಪಟ್ಟ ಕೋಣೆಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ವಿವಿಯ ಆಡಳಿತ ಮಂಡಳಿಗೆ ಈ ವಿಚಾರ ತಿಳಿದಿದೆ.
“ಬೇರೊಬ್ಬ ಪ್ರೊಫೆಸರ್ ರ ವಿದ್ಯಾರ್ಥಿಯೊಬ್ಬರಿಗೆಂದು ನಮ್ಮ ಸಿಬ್ಬಂದಿ ಈ ಕೋಣೆಯನ್ನು ಬುಕ್ ಮಾಡಿದ್ದರು. ಆದರೆ ಈ ಉದ್ದೇಶ ತಪ್ಪಾಗಿದ್ದು, ನಾವು ಈ ಸಂಬಂಧ ತನಿಖೆಗೆ ಆದೇಶಿಸಿದ್ದೇವೆ” ಎಂದು ಜೆಎನ್‌ಟಿಯು ರಿಜಿಸ್ಟ್ರಾರ್ ಆರ್. ಶ್ರೀನಿವಾಸ ರಾವ್ ತಿಳಿಸಿದ್ದಾರೆ.
ಅತಿಥಿ ಉಪನ್ಯಾಸಕರು ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾತ್ರವೇ ಅತಿಥಿ ಗೃಹಗಳನ್ನು ನೀಡಬಹುದಾಗಿದ್ದು, ಹೊರಗಿನ ಮಂದಿಗೆ ಉಳಿದುಕೊಳ್ಳಲು ಅವಕಾಶ ನೀಡಬಾರದು.
ಆಗಸ್ಟ್ 18ರಂದು ಈ ದಂಪತಿ ಕೋಣೆಯಲ್ಲಿ ಉಳಿಯಲೆಂದು ಎರಡು ದಿನಗಳ ಮಟ್ಟಿಗೆ ಬುಕ್ ಮಾಡಲಾಗಿತ್ತು ಎನ್ನಲಾಗಿದೆ.
ವಿವಿಯ ಸಿಬ್ಬಂದಿ ಹೀಗೆ ಅತಿಥಿಗೃಹದಲ್ಲಿ ಉಳಿದುಕೊಳ್ಳಲು ಜೋಡಿಗೆ ವ್ಯವಸ್ಥೆ ಮಾಡಿದ್ದರೆನ್ನಲಾಗಿದ್ದು, ಇದೇ ವೇಳೆ ವಿಡಿಯೋಗ್ರಫಿಯನ್ನೂ ಅರೇಂಜ್ ಮಾಡಲಾಗಿತ್ತು. ತಮ್ಮ ವಿಡಿಯೋವನ್ನು ಸ್ನೇಹಿತರೊಂದಿಗೆ ಈ ಜೋಡಿ ಶೇರ್ ಮಾಡಿದ್ದು, ಅದು ಪಬ್ಲಿಕ್ ಆದ ಬಳಿಕ ಹೀಗೆ ಆಗಿದೆ.