
ಮಂಡ್ಯ: ಮೂರು ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ನವವಿವಾಹಿತೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಶಿಂಡಬೋಗನಹಳ್ಳಿಯಲ್ಲಿ ನಡೆದಿದೆ.
ದಾವಣಗೆರೆ ಮೂಲದ ರಾಧಿಕಾ (23) ಮೃತ ದುರ್ದೈವಿ. ಅಜಯ್ ಗೌಡ ಎಂಬಾತನನ್ನು ಪ್ರೀತಿಸಿ ರಾಧಿಕಾ ಮದುವೆಯಾಗಿದ್ದಳು. ಮೂರು ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಜೋಡಿಗೆ ಅಜಯ್ ಕುಟುಂಬದವರು ಮನೆಗೆ ಸೇರಿಸಿರಲಿಲ್ಲ. ಇದರಿಂದ ಪತಿ-ಪತ್ನಿ ಇಬ್ಬರೂ ಅಜಯ್ ಚಿಕ್ಕಪ್ಪನ ಮನೆಯಲ್ಲಿ ವಾಸವಾಗಿದ್ದರು.
ಮದುವೆಯಾದ ಮೂರೇ ತಿಂಗಳಲ್ಲಿ ರಾಧಿಕಾ ಶವವಾಗಿ ಪತ್ತೆಯಾಗಿದ್ದಾಳೆ. ಅಜಯ್ ಚಿಕ್ಕಪ್ಪನ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ರಾಧಿಕಾ ಪತ್ತೆಯಾಗಿದ್ದು, ಸ್ಥಳಕ್ಕೆ ಆಗಮಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.