
ಕಲಬುರ್ಗಿ: ನವವಿವಾಹಿತೆ, ಪತಿ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಕಲಬುರ್ಗಿ ನಗರದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ನಡೆದಿದೆ.
ಅವರಾದ (ಬಿ) ಗ್ರಾಮದ ನವವಿವಾಹಿತೆ ರಂಜಿತಾ (25) ಮೃತ ಮಹಿಳೆ. ಮೃತ ರಂಜಿತಾ ಕುಟುಂಬದವರು ಪತಿ ಹಾಗೂ ಮನೆಯವರ ವಿರುದ್ಧ ಕೊಲೆ ಆರೋಪ ಮಾಡಿದ್ದು, ಸ್ಟೇಷನ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪತಿ ಉಮೇಶ್ ಕಟ್ಟಿಮನಿ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ಉಮೇಶ್ ಕಟ್ಟಿಮನಿ ನಿರಾವರಿ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್ ಆಗಿದ್ದಾರೆ. 5 ತಿಂಗಳ ಹಿಂದಷ್ಟೇ ಉಮೇಶ್ ಹಾಗೂ ರಂಜಿತಾ ವಿವಾಹವಾಗಿತ್ತು. ಈಗ ರಂಜಿತಾ, ಪತಿ ಮನೆಯಲ್ಲಿಯೇ ಶವವಾಗಿ ಪತ್ತೆಯಾಗಿದ್ದು ಕೊಲೆ ಆರೋಪ ಕೇಳಿಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ರಂಜಿತಾ ಪತಿ ಉಮೇಶ್, ಅತ್ತೆ-ಮಾವ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.