ನವಜಾತ ಶಿಶುವನ್ನು ಮನೆಯ ಶೌಚಾಲಯದ ಕಿಟಕಿಯಿಂದ ಎಸೆದ ಆರೋಪದ ಅಡಿಯಲ್ಲಿ ಮಹಾರಾಷ್ಟ್ರದ ವಿರಾರ್ ಪೊಲೀಸ್ ಠಾಣೆಯಲ್ಲಿ 16 ವರ್ಷದ ಬಾಲಕಿಯ ಮೇಲೆ ಪ್ರಕರಣ ದಾಖಲಾಗಿದೆ. ಈ ಬಾಲಕಿಯು ತನ್ನ ಪೋಷಕರಿಂದ ತಾನು ಗರ್ಭಿಣಿಯಾಗಿರುವ ವಿಚಾರವನ್ನು ಮುಚ್ಚಿಡುವ ಸಲುವಾಗಿ ಸಡಿಲವಾದ ಬಟ್ಟೆಯನ್ನೇ ಧರಿಸುತ್ತಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವಿವಾರ್ ಹೌಸಿಂಗ್ ಸೊಸೈಟಿಯಲ್ಲಿ ಈ ಘಟನೆ ಸಂಭವಿಸಿದೆ. ಸ್ಥಳೀಯರ ಸಹಾಯದಿಂದ ನವಜಾತ ಶಿಶುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಹೆಣ್ಣು ಮಗು ಸಾವನ್ನಪ್ಪಿದೆ ಎಂದು ಆಸ್ಪತ್ರೆ ಮೂಲಗಳು ಮಾಹಿತಿ ನೀಡಿವೆ. ಬಾಲಕಿಯನ್ನು ಪೊಲೀಸರು ರಿಮಾಂಡ್ ಹೋಮ್ನಲ್ಲಿ ಇರಿಸಿದ್ದಾರೆ. ಈ 16 ವರ್ಷದ ಬಾಲಕಿಯ 25 ವರ್ಷದ ಬಾಯ್ಫ್ರೆಂಡ್ ವಿರುದ್ಧವೂ ಪೊಲೀಸರು ಎಫ್ಐಆರ್ ದಾಖಲಿಸಲು ಸಿದ್ಧತೆ ನಡೆಸಿದ್ದಾರೆ.
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಮಂಗಳವಾರ ಮಧ್ಯಾಹ್ನ 12:30ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ತನಿಖೆ ವಿಚಾರವಾಗಿ ಮಾತನಾಡಿದ ಪಿಎಸ್ಐ ಅಭಿಜಿತ್ ಟೇಲರ್, ನಾವು ಮೊದಲು ಸಿಸಿ ಕ್ಯಾಮರಾವನ್ನು ಪರಿಶೀಲನೆ ಮಾಡಿದ್ದೆವು.ಅದರಲ್ಲಿ ಯಾವುದೇ ಮಾಹಿತಿ ಲಭ್ಯವಾಗಿರಲಿಲ್ಲ.
ಹೀಗಾಗಿ ಇದು ಈ ಅಪಾರ್ಟ್ಮೆಂಟ್ನಲ್ಲಿರುವರದ್ದೇ ಯಾರದ್ದೂ ಕೆಲಸ ಅನ್ನೋದು ನಮಗೆ ಖಚಿತವಾಯ್ತು. ಇದಾದ ಬಳಿಕ ನಾವು ಎಲ್ಲಾ ಕಿಟಕಿಗಳನ್ನು ಪರಿಶೀಲನೆ ಮಾಡಿದ ವೇಳೆ 2ನೇ ಮಹಡಿಯಲ್ಲಿ ರಕ್ತದ ಕಲೆಗಳು ಕಾಣಿಸಿದವು. ಮನೆಯ ಒಳಗೆ ಹೋಗಿ ಪರಿಶೀಲನೆ ನಡೆಸಿದ ವೇಳೆ ಶೌಚಾಲಯದಲ್ಲಿ ರಕ್ತದ ಕಲೆಗಳು ಕಾಣಿಸಿದವು. ಆಗ ನಮಗೆ ಈ ಮಗು ಇದೇ ಮನೆಗೆ ಸೇರಿದೆ ಎಂಬ ವಿಚಾರ ಖಾತರಿಯಾಯ್ತು ಎಂದು ಹೇಳಿದ್ರು.
ಇದಾದ ಬಳಿಕ ನಾವು ಬಾಲಕಿಯನ್ನು ಕಸ್ಟಡಿಗೆ ತೆಗೆದುಕೊಂಡು ತನಿಖೆ ಮುಂದುವರಿಸಿದೆವು. ಆಕೆಯ ಬಾಯ್ಫ್ರೆಂಡ್ನನ್ನೂ ವಿಚಾರಣೆಗೆ ಕರೆಯಿಸಲಾಯ್ತು. ತೀವ್ರ ವಿಚಾರಣೆಯ ಬಳಿಕ ಕೊನೆಗೂ ಬಾಲಕಿ ಸತ್ಯಾಂಶವನ್ನು ಬಾಯ್ಬಿಟ್ಟಿದ್ದಾಳೆ. ತಾನು ಸಡಿಲವಾದ ಬಟ್ಟೆಯನ್ನು ಧರಿಸಿ ಗರ್ಭಿಣಿಯಾದ ವಿಚಾರವನ್ನು ಪೋಷಕರಿಂದ ಮುಚ್ಚಿಟ್ಟಿದ್ದೆ ಎಂದು ಹೇಳಿದ್ದಾಳೆ. ಆಕೆಯ ಬಾಯ್ಫ್ರೆಂಡ್ಗೆ ಇನ್ನೂ ತನಿಖೆ ಮುಂದುವರಿದಿದೆ ಎಂದು ಹೇಳಿದ್ರು.