ಗರ್ಭಿಣಿಯರು ಸೇವಿಸುವ ಆಹಾರದಲ್ಲಿ ಮಗುವಿನ ಯೋಗಕ್ಷೇಮವೂ ಅಡಗಿರುತ್ತದೆ. ಹಾಗಾಗಿ ತಾಯಿಯಾದವಳು ಉತ್ತಮ ಪೌಷ್ಟಿಕಾಂಶ ಭರಿತ ಆಹಾರಗಳನ್ನು ಸೇವಿಸುವುದು ಬಹಳ ಮುಖ್ಯ.
ಪಾಲಕ್ ಸೊಪ್ಪು ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇದರಲ್ಲಿ ಕಬ್ಬಿಣಾಂಶ ಸಾಕಷ್ಟಿದ್ದು ಮಹಿಳೆಯರನ್ನು ಕಾಡುವ ಅನಿಮಿಯಾ ಸಮಸ್ಯೆಯನ್ನು ನಿವಾರಿಸುತ್ತದೆ. ರಕ್ತಹೀನತೆಯನ್ನು ಕಡಿಮೆ ಮಾಡುತ್ತದೆ.
ರಾಗಿಯನ್ನು ನಿಮ್ಮ ಅಡುಗೆಯಲ್ಲಿ ಬಳಸಿಕೊಳ್ಳಿ. ರಾಗಿ ದೋಸೆ ತಯಾರಿಸಿ ಇಲ್ಲವೇ ರಾಗಿಯ ಅಂಬಲಿ ಮಾಡಿ ಕುಡಿಯಿರಿ. ಇದರಲ್ಲಿ ಫೈಬರ್ ಜೊತೆಗೆ ವಿಟಮಿನ್ ಹಾಗೂ ಆಂಟಿ ಆಕ್ಸಿಡೆಂಟ್ ಗಳು ಹೇರಳವಾಗಿವೆ.
ನೆಲ್ಲಿಕಾಯಿಯನ್ನು ವಾರದಲ್ಲಿ ಮೂರು ಬಾರಿ ಸೇವಿಸುವುದರಿಂದ ಕಾಲಿನ ಬಾವಿನಿಂದ ಮುಕ್ತಿ ಪಡೆಯಬಹುದು. ಬಾದಾಮಿ ಮತ್ತು ವಾಲ್ ನಟ್ ಸೇವನೆ ಮಾಡುವುದರಿಂದ ತಾಯಿಯ ಹಾಗೂ ಮಗುವಿನ ತೂಕದ ಸಮತೋಲನ ಕಾಪಾಡಬಹುದು. ಇದು ಮಗುವಿನ ಮೆದುಳಿನ ಬೆಳವಣಿಗೆಗೂ ನೆರವಾಗುತ್ತದೆ.