alex Certify ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಮನಸ್ಸಿಗೆ ನಾಟುವ ನವಜಾತ ಶಿಶುವಿನ ಫೋಟೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಮನಸ್ಸಿಗೆ ನಾಟುವ ನವಜಾತ ಶಿಶುವಿನ ಫೋಟೋ

ಪಶ್ಚಿಮ ಬಂಗಾಳದ ಕೆಲವು ಕಡೆ ಮಳೆ ಇನ್ನೂ ನಿಂತಿಲ್ಲ. ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ಮಧ್ಯೆ ಅಲ್ಲಿನ ಆಶಾ ಕಾರ್ಯಕರ್ತೆಯರು, ಪೋಲಿಯೋ ಲಸಿಕೆ ಅಭಿಯಾನ ನಡೆಸುತ್ತಿದ್ದಾರೆ. ಮಗುವೊಂದಕ್ಕೆ ಪೋಲಿಯೋ ಹಾಕಿದ ಫೋಟೋವೊಂದು ಈಗ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ಫೋಟೋವನ್ನು ಮೊದಲ ಬಾರಿ ನೋಡಿದ್ರೆ ಅರ್ಥವಾಗುವುದಿಲ್ಲ. ಸರಿಯಾಗಿ ಗಮನಿಸಿದ್ರೆ ಪರಿಸ್ಥಿತಿ ನಿಮಗೆ ಅರ್ಥವಾಗುತ್ತದೆ.

ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಹೋಗಿ, ಮಕ್ಕಳಿಗೆ ಪೋಲಿಯೋ ಹಾಕ್ತಿದ್ದಾರೆ. ಈ ಮಧ್ಯೆ ತಂದೆಯೊಬ್ಬ, ಮಗುವನ್ನು ಪಾತ್ರೆಯಲ್ಲಿ ಮಲಗಿಸಿ ತಂದಿದ್ದಾನೆ. ತಾಯಿ ಆ ಸ್ಥಳಕ್ಕೆ ಬರಲು ಸಾಧ್ಯವಿರಲಿಲ್ಲ. ಮಳೆಯಲ್ಲಿ ಮಗುವನ್ನು ಎತ್ತಿಕೊಂಡು ಬರುವುದು ಕಷ್ಟ. ಹಾಗಾಗಿ ಮಗುವನ್ನು ಪಾತ್ರೆಯಲ್ಲಿ ಮಲಗಿಸಿ, ಆಶಾ ಕಾರ್ಯಕರ್ತೆ ಬಳಿ ಕರೆತರಲಾಗಿದೆ.

ದೆಹಲಿ ಮೂಲದ ಏಮ್ಸ್ ವೈದ್ಯ ಯೋಗಿರಾಜ್ ರೈ, ಈ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಸುಂದರ್‌ಬನ್ಸ್ ನಲ್ಲಿ ಪಲ್ಸ್ ಪೋಲಿಯೋ ಲಸಿಕೆ ಫೋಟೋ. ಜಲಾವೃತ ಪ್ರದೇಶಗಳಲ್ಲಿ ಆಶಾ ಕಾರ್ಯಕರ್ತೆಯರ ಅವಿರತ ಪ್ರಯತ್ನ ಎಂದು ಬರೆದಿದ್ದಾರೆ. ಈ ಫೋಟೋವನ್ನು ಎರಡು ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಣೆ ಮಾಡಲಾಗಿದೆ. ಸಾಕಷ್ಟು ಲೈಕ್ ಬಂದಿದೆ. ನೂರಕ್ಕೂ ಹೆಚ್ಚು ಬಾರಿ ರೀಟ್ವೀಟ್ ಮಾಡಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...