ಮಿಲನ್: ಇಟಲಿಯ ಇಶಿಯಾ ದ್ವೀಪದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ನವಜಾತ ಶಿಶು ಸೇರಿ 7 ಜನ ಸಾವನ್ನಪ್ಪಿದ್ದಾರೆ.
ಇಟಲಿಯ ಇಶಿಯಾದ ಕ್ಯಾಸಮಿಸಿಯೋಲಾದಲ್ಲಿ ಘಟನೆ ನಡೆದಿದೆ. ಪರ್ವತದ ಕೆಳಗಿನ ದ್ವೀಪದ ಇಶಿಯಾದಲ್ಲಿ ಜನನಿಬಿಡ ಬಂದರು ನಗರದಲ್ಲಿ ಮಣ್ಣು ಮತ್ತು ಅವಶೇಷಗಳಲ್ಲಿ ಹೂತುಹೋಗಿದ್ದ 3 ವಾರಗಳ ಶಿಶು ಮತ್ತು ಒಂದು ಜೋಡಿ ಯುವ ಒಡಹುಟ್ಟಿದವರು ಸೇರಿದಂತೆ 7 ಮೃತದೇಹಗಳನ್ನು ಶೋಧ ತಂಡಗಳು ಪತ್ತೆ ಹಚ್ಚಿವೆ. ಇತರ ಬಲಿಪಶುಗಳನ್ನು ಬಾಲಕನ ಪೋಷಕರು, 5 ವರ್ಷದ ಬಾಲಕಿ ಮತ್ತು ಆಕೆಯ 11 ವರ್ಷದ ಸಹೋದರ, 31 ವರ್ಷದ ದ್ವೀಪ ನಿವಾಸಿ ಮತ್ತು ಬಲ್ಗೇರಿಯನ್ ಪ್ರವಾಸಿ ಎಂದು ಗುರುತಿಸಲಾಗಿದೆ.
ಶನಿವಾರ ಮುಂಜಾನೆ ಮೊದಲು ಕ್ಯಾಸಮಿಸಿಯೋಲಾದಲ್ಲಿ ಭಾರಿ ಭೂಕುಸಿತದ ನಂತರ ಭಗ್ನಾವಶೇಷಗಳ ಅಡಿಯಲ್ಲಿ ಅವರು ಸಮಾಧಿಯಾದರು. ಕಟ್ಟಡಗಳು ಕುಸಿದು ವಾಹನಗಳು ಸಮುದ್ರ ಪಾಲಾಗಿವೆ. ಆ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಪರ್ವತದ ಭಾಗ ಸಡಿಲಗೊಂಡಿತು, ಮಣ್ಣು ಮತ್ತು ನೀರು ಎಲ್ಲಾ ಜಾಗವನ್ನು ತುಂಬಿಕೊಂಡವು ಎಂದು ಇಟಾಲಿಯನ್ ಅಗ್ನಿಶಾಮಕ ದಳದ ವಕ್ತಾರ ಲುಕಾ ಕ್ಯಾರಿ ತಿಳಿಸಿದರು.