ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಆರ್ಡೆರ್ನ್ ಎಫ್ ಬಿ ಲೈವ್ ಸಮಯದಲ್ಲಿ ಮಗಳಿಂದ ಅಡ್ಡಿಗೊಳಗಾದ ಪ್ರಸಂಗದ ವಿಡಿಯೋ ಕ್ಲಿಪ್ ಈಗ ವೈರಲ್ ಆಗಿದೆ.
ಸಾರ್ವಜನಿಕ ಆರೋಗ್ಯ ಕುರಿತಂತೆ ಅವರು ಲೈವ್ ಸ್ಟ್ರೀಮ್ ನಡೆಸುತ್ತಿದ್ದಾಗ ಅವರ ಮಗಳು ನೆವ್ ಮಿಡ್ ವೇ ಕಡೆಯಿಂದ ಅಡ್ಡಿಯಾಗಿದ್ದರಿಂದ ಕೊಂಚ ವಿಚಲಿತರಾದಂತೆ ಕಾಣಿಸಿದರು. ಜತೆಗೆ ಮಮ್ಮಿ ಎಂದು ಮಗಳು ಕರೆಯುವುದು ಅಲ್ಲಿ ಕೇಳಿಸುತ್ತದೆ.
ಕೋವಿಡ್ ಹೊಸ ಫ್ರೇಮ್ ವರ್ಕ್ ಬಗ್ಗೆ ಆರ್ಡೆನ್ ಚರ್ಚೆ ಮಾಡಲು ಕುಳಿತಾಗ ಅವರ ಮೂರು ವರ್ಷದ ಮಗಳು ತನ್ನ ಕೋಣೆಯಿಂದ ಹೊರಬಂದು ಮಾತನಾಡಲು ಯತ್ನಿಸಿದ್ದಳು.
ರೈತರ ಮಕ್ಕಳ ಖಾತೆಗೆ ಹಣ ಜಮಾ: ‘ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆ’ ಬಗ್ಗೆ ಇಲ್ಲಿದೆ ಮಾಹಿತಿ
ಇತ್ತೀಚೆಗೆ ಕೋವಿಡ್ ಕಾರಣದಿಂದ ವರ್ಕ್ ಫ್ರಂ ಇದ್ದಾಗ ಮೀಟಿಂಗ್ ನಡೆಸುವಾಗ ಅನೇಕರಿಗೆ ಮನೆಯವರಿಂದ, ಸಾಕು ಪ್ರಾಣಿಗಳಿಂದ ಅಡಚಣೆಯಾದ ಸುದ್ದಿ ಕೇಳಿದ್ದೇವೆ, ಇದೀಗ ಒಂದು ದೇಶದ ಪ್ರಧಾನಿಗೆ ಅಡ್ಡಿಯಾದ ಪ್ರಸಂಗ ವೈರಲ್ ಆಗಿದೆ.
ಆರ್ಡೆನ್ ಅವರು ಅಡಚಣೆಗೆ ಕ್ಷಮೆಯನ್ನೂ ಕೋರುತ್ತಾ ನಗುತ್ತಾರೆ. ನಂತರ ಲೈವ್ ಸ್ಟ್ರೀಮ್ ಗೆ ಮರಳಿ ವಿಷಯವನ್ನು ಮುಂದುವರಿಸುತ್ತಾರೆ. ಅವರು ತಮ್ಮ ಮಾತಿನ 2 ನಿಮಿಷ 58ನೇ ಸೆಕೆಂಡ್ ನಲ್ಲಿ ಇಂತಹ ಅಡಚಣೆ ಎದುರಿಸುತ್ತಾರೆ.
https://www.youtube.com/watch?v=5YDJcNBMVlk