40 ವರ್ಷದ ನ್ಯೂಜಿಲ್ಯಾಂಡಿನ ನಿವಾಸಿ ಝೇನ್ ವೆಡ್ಡಿಂಗ್ ಎಂಬಾತ ಈಜುಕೊಳಕ್ಕೆ ತೆರಳಿದ್ದ. ಕೆಲವು ಗಂಟೆ ಈಜಿದ ಬಳಿಕ ಆತನ ಕಿವಿಯೊಳಗೆ ನೀರು ಶೇಖರಣೆಯಾಗಿ ಸರಿಯಾಗಿ ಕೇಳಿಸದ ಪರಿಸ್ಥಿತಿ ನಿರ್ಮಾಣವಾಗಿತ್ತು. ಜತೆಗೆ ರಾತ್ರಿ ಮಲಗಿದಾಗ ಕಿವಿಯೊಳಗೆ ಏನೋ ಓಡಾಡಿದ ಅನುಭವ ಆಗುತ್ತಿತ್ತು.
ಗಾಬರಿಗೊಂಡ ಝೇನ್, ಸೀದಾ ವೈದ್ಯರ ಬಳಿಗೆ ತೆರಳಿದರು. ಡಾಕ್ಟರ್ ಕೂಡ ಹೇರ್ ಡ್ರೈಯರ್ ಮೂಲಕ ಕಿವಿಯೊಳಗೆ ಒಣಗಿಸಿಕೊಳ್ಳಲು ಸೂಚಿಸಿದರು. ಜತೆಗೆ ಆ್ಯಂಟಿಬಯೋಟಿಕ್ ಮಾತ್ರೆಗಳನ್ನು ಕೂಡ ಕೊಟ್ಟಿದ್ದರು. ಎರಡು ರಾತ್ರಿಗಳು ಕಳೆದರೂ ಕಿವಿಯಲ್ಲಿನ ಸಮಸ್ಯೆ ಪರಿಹಾರವಾಗಿರಲಿಲ್ಲ.
ನಂತರ ಆತ ಕಿವಿಯ ತಜ್ಞವೈದ್ಯರ ಬಳಿಗೆ ತೆರಳಿದ. ಅವರು ಸೂಕ್ಷ್ಮ ದರ್ಶಕದಲ್ಲಿ ನೋಡಿದ ಕೂಡಲೇ ಕಿವಿಯೊಳಗೆ ಕ್ರಿಮಿ ಇರುವುದು ಖಾತರಿ ಆಯಿತು. ಒಂದು ದೊಡ್ಡ ಜಿರಳೆಯು ಸತ್ತ ಸ್ಥಿತಿಯಲ್ಲಿ ಕಿವಿಯೊಳಗೆ ಪತ್ತೆಯಾಗಿತ್ತು. ಇದನ್ನ ಕಂಡ ವೈದ್ಯರು ಹೌಹಾರಿದರು. ದೇವರೆ ಇದೇನು ನಿಮ್ಮ ಕಿವಿಯೊಳಗೆ ದೊಡ್ಡ ಜಿರಳೆ ಸತ್ತಿದೆ ಎಂದರು. ಆಗ ಝೇನ್ ಪೂರ್ಣ ಆತಂಕದಲ್ಲಿ ಮುಳುಗಿದ.
ಕೊರೊನಾ ಸಾವುಗಳ ಕುರಿತು ಶಾಕಿಂಗ್ ಸಂಗತಿ ಬಹಿರಂಗ; ಲಸಿಕೆ ಪಡೆಯದವರೇ ಮಹಾಮಾರಿಗೆ ಅತಿಹೆಚ್ಚು ಟಾರ್ಗೆಟ್
ಸಮಾಧಾನ ಮಾಡಿಕೊಂಡು ವೈದ್ಯರು, ಸಣ್ಣ ಶಸ್ತ್ರಚಿಕಿತ್ಸೆ ನಡೆಸಿ ಸತ್ತಿದ್ದ ಜಿರಳೆಯನ್ನು ಕಿವಿಯಿಂದ ಹೊರತೆಗೆದರು. ಬರೋಬ್ಬರಿ 3 ದಿನಗಳವರೆಗೆ ಝೇನ್ ಕಿವಿಯೊಳಗೆ ಜಿರಳೆ ವಾಸಮಾಡಿತ್ತು. ಯಾವುದೋ ಬಾಗಿಲ ಸಂಧಿಯಲ್ಲಿನ ಸಣ್ಣ ತೂತು ಈ ಕಿವಿ ಎಂದು ಜಿರಳೆ ಭಾವಿಸಿದ್ದಿರಬಹುದು, ಅಲ್ಲವೇ…?