ನ್ಯೂಜಿಲೆಂಡ್ ನಲ್ಲಿ ಅಗ್ನಿ ದುರಂತ ಸಂಭವಿಸಿದ್ದು, ಆರು ಜನ ಸಜೀವದಹನವಾಗಿದ್ದಾರೆ. ವೆಲ್ಲಿಂಗ್ಟನ್ ನಗರದ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಘಟನೆ ನಡೆದಿದೆ. ಕಟ್ಟಡದಲ್ಲಿ ಬೆಂಕಿ ವ್ಯಾಪಿಸಿ ಆರು ಜನರು ಸಾವನ್ನಪ್ಪಿದ್ದಾರೆ.
ನ್ಯೂಜಿಲೆಂಡ್ ರಾಜಧಾನಿ ವೆಲ್ಲಿಂಗ್ಟನ್‌ನ ಲೋಫರ್ಸ್ ಲಾಡ್ಜ್ ಹಾಸ್ಟೆಲ್ ನಲ್ಲಿ ರಾತ್ರಿಯಿಡೀ ಬೆಂಕಿ ಕಾಣಿಸಿಕೊಂಡಿದೆ, ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ. ಇತರರು ನಾಲ್ಕು ಅಂತಸ್ತಿನ ಕಟ್ಟಡದಿಂದ ಜಿದಿದು ಪಾರಾಗಿದ್ದಾರೆ. ಅನೇಕರನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ, ಹುಡುಕಾಟ ಮುಂದುವರೆದಿದೆ.
ಐವತ್ತೆರಡು ಜನರನ್ನು ರಕ್ಷಿಸಲಾಗಿದೆ. ಅಗ್ನಿಶಾಮಕ ದಳದವರು ಇನ್ನೂ ಇತರರಿಗಾಗಿ ಹುಡುಕುತ್ತಿದ್ದಾರೆ ಎಂದು ವೆಲ್ಲಿಂಗ್ಟನ್ ಅಗ್ನಿಶಾಮಕ ಮತ್ತು ತುರ್ತು ಜಿಲ್ಲಾ ವ್ಯವಸ್ಥಾಪಕ ನಿಕ್ ಪ್ಯಾಟ್ ಹೇಳಿದ್ದಾರೆ.
ಪ್ರಧಾನ ಮಂತ್ರಿ ಕ್ರಿಸ್ ಹಿಪ್ಕಿನ್ಸ್, ಆರು ಜನರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
ವೆಲ್ಲಿಂಗ್‌ಟನ್ ಸಿಟಿ ಕೌನ್ಸಿಲ್ ವಕ್ತಾರ ರಿಚರ್ಡ್ ಮ್ಯಾಕ್ ಲೀನ್, ಬೆಂಕಿಯಿಂದ ಪಾರಾದ ಸುಮಾರು 50 ಜನರಿಗೆ ನಗರ ಅಧಿಕಾರಿಗಳು ಸಹಾಯ ಮಾಡುತ್ತಿದ್ದಾರೆ. ತುರ್ತು ಸೇವಾ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ಹೇಳಿದ್ದಾರೆ.