ನ್ಯೂಜಿಲೆಂಡ್, ಆಸ್ಟ್ರೇಲಿಯಾದಲ್ಲಿ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲಾಗಿದೆ. ಆಕ್ಲೆಂಡ್, ಸಿಡ್ನಿ, ಮೆಲ್ಬೋರ್ನ್ ನಲ್ಲಿ ಅದ್ಭುತ ಬೆಳಕಿನ ಪ್ರದರ್ಶನ ಮತ್ತು ಪಟಾಕಿಗಳೊಂದಿಗೆ ಹೊಸ ವರ್ಷ ಬರಮಾಡಿಕೊಳ್ಳಲಾಗಿದೆ.
ನ್ಯೂಜಿಲೆಂಡ್‌ನ ಅತಿ ಎತ್ತರದ ಸ್ಕೈ ಟವರ್ ನಿಂದ ವರ್ಣರಂಜಿತ ಪಟಾಕಿಗಳು ಮತ್ತು ಅದ್ಭುತವಾದ ಡೌನ್‌ಟೌನ್ ಲೈಟ್ ಶೋನಿಂದ ಕಣ್ಮನ ತಣಿಸುವ ಶೋನೊಂದಿಗೆ ಹೊಸ ವರ್ಷ ಬರಮಾಡಿಕೊಳ್ಳಲಾಗಿದೆ. ಆಕ್ಲೆಂಡ್ 2025 ಅನ್ನು ಸ್ವಾಗತಿಸುವ ಮೊದಲ ಪ್ರಮುಖ ನಗರವಾಗಿದೆ. ಸಾವಿರಾರು ಜನರು ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದಾರೆ.
ಆಸ್ಟ್ರೇಲಿಯಾದಲ್ಲಿಯೂ ಸಂಭ್ರಮಾಚರಣೆ ಜೋರಾಗಿದೆ. ಸಿಡ್ನಿಯ ಹೊಸ ವರ್ಷದ ಆಚರಣೆಯ ಮೊದಲ ಭಾಗವಾಗಿ ಮಧ್ಯರಾತ್ರಿಯ ಮೊದಲು ಆಕರ್ಷ ಸಿಡಿಮದ್ದು ಪ್ರದರ್ಶನದೊಂದಿಗೆ ಸಂಭ್ರಮಾಚರಣೆ ನಡೆದಿದೆ. ಹೊಸ ವರ್ಷ ಸ್ವಾಗತಿಸಿ ಶುಭಾಶಯ ವಿನಿಮಯ ಮಾಡಿಕೊಂಡಿದ್ದಾರೆ. ದಕ್ಷಿಣ ಪೆಸಿಫಿಕ್ ಮಹಾಸಾಗರದ ದೇಶಗಳು ಮೊದಲಿಗೆ ಹೊಸ ವರ್ಷ ಸ್ವಾಗತಿಸುತ್ತವೆ.