ಎರಡು ವರ್ಷಗಳ ಹಿಂದೆ ನ್ಯೂಯಾರ್ಕ್‌ನಲ್ಲಿ ನಾಪತ್ತೆಯಾಗಿದ್ದ ಬಾಲಕಿಯೊಬ್ಬಳು ಮನೆಯ ಮೆಟ್ಟಿಲ ಕೆಳಗೆ ಜೀವಂತವಾಗಿ ಪತ್ತೆಯಾಗಿದ್ದಾಳೆ. ಬಾಲಕಿಯನ್ನು ಪೈಸ್ಲೀ ಶುಲ್ಟಿಸ್ ಎಂದು ಗುರುತಿಸಲಾಗಿದೆ. ಆಕೆ ನಾಪತ್ತೆಯಾಗಿದ್ದಾಗ ಅವಳು ನಾಲ್ಕು ವರ್ಷ ವಯಸ್ಸಿನವಳಾಗಿದ್ದಳು.
ಕಾನೂನಾತ್ಮಕವಾಗಿ ಆಕೆ ಪೋಷಕರಲ್ಲದ ಕಿಂಬರ್ಲಿ ಕೂಪರ್(33) ಮತ್ತು ಕಿರ್ಕ್ ಶುಲ್ಟಿಸ್ ಜೂನಿಯರ್(32) ಅವಳನ್ನ ಅಪಹರಿಸಿದ್ದರು ಎನ್ನಲಾಗಿದೆ. 2019ರಲ್ಲಿ ಆಕೆ ಕಾಣೆಯಾದ ಸ್ಥಳದಲ್ಲಿ ಅಂದರೆ ನ್ಯೂಯಾರ್ಕ್ ನಗರದಿಂದ ಸುಮಾರು 210 ಕಿ.ಮೀ. ಅಂತರದಲ್ಲಿರುವ ಕಯುಗಾ ಹೈಟ್ಸ್‌ನ ಪೂರ್ವದಲ್ಲಿರುವ ಮನೆಯೊಂದರಲ್ಲಿ ಆಕೆ ದೊರೆತಿದ್ದಾಳೆಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಆಕೆಯನ್ನು ಸೌಗರ್ಟೀಸ್ ಪ್ರದೇಶದಲ್ಲಿರುವ ಮನೆಯ ಮೆಟ್ಟಿಲ ಕೆಳಗೆ ಇರಿಸಲಾಗಿತ್ತು ಎನ್ನಲಾಗಿದೆ.
BREAKING: ರಾಜ್ಯದಲ್ಲಿ ಕೊರೋನಾ ಸಾವಿನ ಸಂಖ್ಯೆ ಮತ್ತಷ್ಟು ಇಳಿಕೆ; ಇಲ್ಲಿದೆ ಮಾಹಿತಿ
ಮರದ ಮೆಟ್ಟಿಲುಗಳನ್ನ ತೆರವುಗೊಳಿಸಿದಾಗ ಪೊಲೀಸರಿಗೆ ಮೊದಲು ಬಾಲಕಿಯ ಪಾದಗಳ ಗುರುತು ಕಾಣಿಸಿದೆ. ಆನಂತರ ಆ ಪ್ರದೇಶವನ್ನು ಹುಡುಕಿದಾಗ ಬಾಲಕಿ ದೊರೆತಿದ್ದಾಳೆ. ಶುಲ್ಟೀಸ್ ಮಿಸ್ಸಿಂಗ್ ಕಂಪ್ಲೆಂಟ್ ಅನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರ ಬಳಿ, ಕೂಪರ್ ವಿರುದ್ಧ ಅಲ್ಸ್ಟರ್ ಕೌಂಟಿಯಲ್ಲಿ ವಾರೆಂಟ್ ಸಹ ಹೊಂದಿದ್ದರು. ಇದರ ಮೂಲಕ ಕೂಪರ್ ಅವರನ್ನು ವಿಚಾರಣೆಗೆ ಒಳಪಡಿಸಲಾಯಿತು. ಈಗ ಅವರು ಅಲ್ಸ್ಟರ್ ಕೌಂಟಿಯ ಜೈಲಿನಲ್ಲಿದ್ದಾರೆ ಎಂದು ವರದಿಯಾಗಿದೆ.
ಕಿರ್ಕ್ ಶುಲ್ಟಿಸ್ ಜೂನಿಯರ್ ಅವರು 2019 ರಿಂದ ಹುಡುಗಿಯನ್ನು ನೋಡಿಲ್ಲ ಮತ್ತು ಕೂಪರ್ ಹುಡುಗಿಯೊಂದಿಗೆ ಪೆನ್ಸಿಲ್ವೇನಿಯಾಕ್ಕೆ ಓಡಿಹೋಗಿದ್ದರೆಂದು ಪೊಲೀಸರಿಗೆ ತಿಳಿಸಿದ್ದಾರೆ. ಸದ್ಯ ಬಾಲಕಿ ಆರೋಗ್ಯವಾಗಿದ್ದು ಅವಳನ್ನು ಆಕೆಯ ಕಾನೂನುಬದ್ಧ ಪೋಷಕಿ ಅಂದರೆ ಆಕೆಯ ಹಿರಿಯ ಸಹೋದರಿಗೆ ಒಪ್ಪಿಸಲಾಗಿದೆ.