ತಪ್ಪು ಮಾಡಿದ ಅನೇಕರಿಗೆ ಇನ್ನೂ ಶಿಕ್ಷೆಯಾಗಿಲ್ಲ. ಪೊಲೀಸರ ಕಣ್ಣು ತಪ್ಪಿಸಿ ಓಡಾಡುವವರಿದ್ದಾರೆ. 30 ವರ್ಷಗಳ ಕಾಲ, ನಗರದ ಮಾಜಿ ಪ್ಲಾಸ್ಟಿಕ್ ಸರ್ಜನ್ ಒಬ್ಬ, ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದ.
1985 ರಲ್ಲಿ ತನ್ನ ಪತ್ನಿಯನ್ನು ಕೊಲೆ ಮಾಡಿದ್ದ. ನ್ಯೂಯಾರ್ಕ್ ನಗರದ ಮಾಜಿ ಪ್ಲಾಸ್ಟಿಕ್ ಸರ್ಜನ್ ಕೊನೆಗೂ ತಪ್ಪೊಪ್ಪಿಕೊಂಡಿದ್ದಾನೆ. 30 ವರ್ಷಗಳ ಕಾಲ ತಾನು ನಿರಪರಾಧಿ ಎಂದು ಆತ ಹೇಳಿಕೊಂಡು ಓಡಾಡ್ತಿದ್ದ.
ಮಾಸ್ಕ್ ಹಾಗೂ ಸಾಮಾಜಿಕ ಅಂತರಗಳಿಂದ ಮುಕ್ತವಾಗೋದು ಯಾವಾಗ…..? ತಜ್ಞರು ನೀಡಿದ್ದಾರೆ ಈ ಉತ್ತರ
ಮಾಜಿ ಪ್ಲಾಸ್ಟಿಕ್ ಸರ್ಜನ್ ಹೆಸರು ರಾಬರ್ಟ್ ಬಿರೆನ್ಬಾಮ್. ಒಬ್ಬ ಅನುಭವಿ ಪೈಲಟ್ ಕೂಡ ಆಗಿದ್ದ. ಪತ್ನಿ ಗೇಲ್ ಕಾಟ್ಜ್ ಕತ್ತು ಹಿಸುಕಿ ಕೊಲೆ ಮಾಡಿ ದೇಹವನ್ನು ಸಮುದ್ರಕ್ಕೆ ಎಸೆದಿದ್ದ. ಪತ್ನಿ ತನ್ನ ಮೇಲೆ ಸಿಕ್ಕಾಪಟ್ಟೆ ಕೂಗಾಡ್ತಿದ್ದಳು. ಇದ್ರಿಂದ ಕೋಪ ತಡೆಯಲಾಗಲಿಲ್ಲ. ಆಕೆ ಕತ್ತು ಹಿಸುಕಿ ಹತ್ಯೆ ಮಾಡಿದ್ದೆ. ನಂತ್ರ ಏನು ಮಾಡ್ಬೇಕೆಂದು ಗೊತ್ತಾಗಲಿಲ್ಲ. ವಿಮಾನದ ಬಾಗಿಲು ತೆಗೆದು ಆಕೆ ಶವವನ್ನು ಸಮುದ್ರಕ್ಕೆ ಎಸೆದಿದ್ದೆ ಎಂದಿದಾನೆ.
ಆತನನ್ನು ಎಲ್ಲರೂ ಸಾಧು ಎಂದುಕೊಂಡಿದ್ದರು. ಶಾಂತ ಸ್ವಭಾವದವನು ಎಂದುಕೊಂಡಿದ್ದರು. ಆದ್ರೆ ಆತ ಮಾನಸಿಕ ರೋಗಿ ಎಂಬುದು ಗೊತ್ತಿರಲಿಲ್ಲ. ರಾಬರ್ಟ್ ಎಂದೂ ತನ್ನ ಪತ್ನಿ ಹತ್ಯೆ ಮಾಡ್ತಾನೆಂದು ನಾವು ಅಂದುಕೊಂಡಿರಲಿಲ್ಲವೆಂದು ಆತನ ಸ್ನೇಹಿತರು ಹೇಳಿದ್ದಾರೆ. ಗೇಲ್ ಸಹೋದರಿ ಕೂಡ ಇದೇ ಸಂಗತಿ ಹೇಳಿದ್ದಾಳೆ. ಸ್ವಲ್ಪ ಅನುಮಾನವಿತ್ತು. ಪತ್ನಿ ನಾಪತ್ತೆಯಾಗಿದ್ದಾಳೆಂದು ಆತ ಹೇಳಿದ್ದ ಎಂದಿದ್ದಾರೆ. 1980ರಲ್ಲಿ ಇಬ್ಬರ ಮದುವೆಯಾಗಿತ್ತಂತೆ. ಮದುವೆಯಾದ ಎರಡು ವರ್ಷಕ್ಕೆ ಇಬ್ಬರ ಮಧ್ಯೆ ಗಲಾಟೆ ಶುರುವಾಗಿತ್ತಂತೆ. ಒಮ್ಮೆ ಬೆಕ್ಕನ್ನು ಪತ್ನಿ ಮೈ ಮೇಲೆ ಹಾಕಿದ್ದನಂತೆ.