ಬೆಂಗಳೂರು : ಬೆಂಗಳೂರಲ್ಲಿ ಹೊಸ ವರ್ಷದ ಸೆಲೆಬ್ರೇಷನ್ ಜೋರಾಗಿತ್ತು. ಮದಿರೆಯ ಮತ್ತಲ್ಲಿ ಯುವಕ ಯುವತಿಯರು ತೂರಾಡಿದ್ದಾರೆ. ಕೆಲವು ಸಣ್ಣಪುಟ್ಟ ಕಿರಿಕ್ ಗಳು ಕೂಡ ನಡೆದ ಘಟನೆ ನಡೆದಿದೆ.
ಕುಡಿದ ಮತ್ತಿನಲ್ಲಿ ನಡುರಸ್ತೆಯಲ್ಲೇ ಯುವತಿಯರು ತೇಲಾಡಿದ ಘಟನೆ ಕೂಡ ಬೆಂಗಳೂರಿನಲ್ಲಿ ನಡೆದಿದೆ. ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಇಂದಿರಾನಗರ ಸೇರಿದಂತೆ ಎಲ್ಲೆಡೆ ಪಾರ್ಟಿ ಮುಗಿದ ಬಳಿಕ ಯುವತಿಯರು ನಡುರಸ್ತೆಯಲ್ಲೇ ತೂರಾಡಿದ್ದಾರೆ. ಕುಡಿದು ಪ್ರಜ್ಞೆ ತಪ್ಪಿದ ಯುವತಿಯರನ್ನ ಪೊಲೀಸರು ಸೇಫ್ಟಿ ಹೈಲ್ಯಾಂಡ್ಗೆ ಕಳುಹಿಸಿದರು.
ಎಂಜಿ ರೋಡ್, ಬ್ರಿಗೇಡ್ ರೋಡ್, ಇಂದಿರಾನಗರ, ಕೋರಮಂಗಲ ಸೇರಿದಂತೆ ಬೆಂಗಳೂರಿನ ಎಲ್ಲಾ ಕಡೆ ಜನ ಹೊಸ ವರ್ಷವನ್ನು ಸೆಲೆಬ್ರೇಟ್ ಮಾಡಿದ್ದಾರೆ. ಈ ಬಾರಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬೆಂಗಳೂರು ಪೊಲೀಸರು ಮುನ್ನೆಚ್ಚರಿಕೆ ವಹಿಸಿದರು. ಇನ್ನೂ ಕೆಲವು ಪುಂಡರು ಪೊಲೀಸರ ಕಣ್ಣು ತಪ್ಪಿಸಿ ಸಣ್ಣ ಪುಟ್ಟ ಕಿರಿಕ್ ಮಾಡಿದ ಘಟನೆ ಕೂಡ ನಡೆದಿದೆ.