ನವದೆಹಲಿ: ಹೊಸ ವರ್ಷದ ಉಡುಗೊರೆಯಾಗಿ ಸರ್ಕಾರಿ ನೌಕರರಿಗೆ ಶೇ. 4 ರಷ್ಟು ಡಿಎ ಹೆಚ್ಚಳ ಮಾಡುವುದಾಗಿ ಒಡಿಶಾ ಸರ್ಕಾರ ಘೋಷಿಸಿದೆ.
7 ನೇ ವೇತನ ಆಯೋಗದ ಅಡಿಯಲ್ಲಿ ಎಲ್ಲಾ ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ(ಡಿಎ) ಹೆಚ್ಚಳವನ್ನು ಹೊಸ ವರ್ಷದ ಕೊಡುಗೆಯಾಗಿ ಒಡಿಶಾ ಸರ್ಕಾರ ಘೋಷಿಸಿದೆ.
ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಡಿಎಯಲ್ಲಿ 4% ಹೆಚ್ಚಳವನ್ನು ಘೋಷಿಸಿದರು. ಅಧಿಕೃತ ಸೂಚನೆಯ ಪ್ರಕಾರ, ಹೆಚ್ಚಳವು ಜುಲೈ 1, 2022 ರಿಂದ ಜಾರಿಗೆ ಬರಲಿದೆ.
ಇತ್ತೀಚಿನ ಪರಿಷ್ಕರಣೆಯೊಂದಿಗೆ, ಡಿಎ ಮತ್ತು ಡಿಆರ್ ದರವು ಈಗ ಶೇಕಡಾ 38 ರಷ್ಟಿದೆ. ಇದು ಈ ವರ್ಷ ಎರಡನೇ ಬಾರಿಗೆ ಡಿಎ ಹೆಚ್ಚಳವಾಗಿದೆ. ಸೆಪ್ಟೆಂಬರ್‌ನಲ್ಲಿ, ರಾಜ್ಯ ಸರ್ಕಾರವು ರಾಜ್ಯ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಡಿಎ ಮತ್ತು ಡಿಆರ್‌ನಲ್ಲಿ ಶೇಕಡಾ ಮೂರು ಹೆಚ್ಚಳವನ್ನು ಘೋಷಿಸಿತ್ತು.