alex Certify ಆಶಾ, ಬಿಸಿಯೂಟ ಕಾರ್ಯಕರ್ತೆಯರಿಗೆ ಹೊಸ ವರ್ಷದ ಉಡುಗೊರೆ: ಉಚಿತ ಆರೋಗ್ಯ ಸೌಲಭ್ಯ, ಹೆರಿಗೆ ರಜೆ, ಪ್ರೋತ್ಸಾಹ ಧನ ಘೋಷಣೆ ಮಾಡಿದ ಪಂಜಾಬ್ ಸಿಎಂ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಶಾ, ಬಿಸಿಯೂಟ ಕಾರ್ಯಕರ್ತೆಯರಿಗೆ ಹೊಸ ವರ್ಷದ ಉಡುಗೊರೆ: ಉಚಿತ ಆರೋಗ್ಯ ಸೌಲಭ್ಯ, ಹೆರಿಗೆ ರಜೆ, ಪ್ರೋತ್ಸಾಹ ಧನ ಘೋಷಣೆ ಮಾಡಿದ ಪಂಜಾಬ್ ಸಿಎಂ

ನವದೆಹಲಿ: ಪಂಜಾಬ್ ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಚನ್ನಿ ಆಶಾ ಕಾರ್ಯಕರ್ತೆಯರಿಗೆ 2,500 ರೂ. ನಿಗದಿತ ಮಾಸಿಕ ಭತ್ಯೆಯನ್ನು ಘೋಷಿಸಿದ್ದಾರೆ. ಮಧ್ಯಾಹ್ನದ ಊಟದ ಕಾರ್ಮಿಕರ ನಿಗದಿತ ಭತ್ಯೆಯನ್ನೂ ಹೆಚ್ಚಿಳ ಮಾಡುವುದಾಗಿ ಘೋಷಿಸಿದ್ದಾರೆ.

ಹೊಸ ವರ್ಷದ ಕೊಡುಗೆಯಾಗಿ ಆಶಾ ಮತ್ತು ಮಧ್ಯಾಹ್ನದ ಊಟದ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರ ಒಟ್ಟು 124.25 ಕೋಟಿ ರೂ. ಪ್ರೋತ್ಸಾಹಧನ ನೀಡಲಿದೆ. ಸುಮಾರು 22,000 ಆಶಾ ಕಾರ್ಯಕರ್ತೆಯರಿಗೆ ಅನುಕೂಲವಾಗುವ ಕ್ರಮದಿಂದ ರಾಜ್ಯದ ಬೊಕ್ಕಸಕ್ಕೆ ಸುಮಾರು 60 ಕೋಟಿ ರೂ. ಹೊರೆಯಾಗಲಿದೆ.

ಇದಲ್ಲದೆ, ಆಶಾ ಕಾರ್ಯಕರ್ತೆಯರು 5 ಲಕ್ಷ ರೂ.ವರೆಗಿನ ನಗದು ರಹಿತ ಆರೋಗ್ಯ ವಿಮಾ ಯೋಜನೆಯ ಸೌಲಭ್ಯಕ್ಕೆ ಅರ್ಹರಾಗಿರುತ್ತಾರೆ. ತಮ್ಮ ಕರ್ತವ್ಯ ನಿರ್ವಹಿಸುವಾಗ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಸಂಭವನೀಯ ಅಪಾಯದ ವಿರುದ್ಧ ಚಿಕಿತ್ಸಾ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ.

ಮತ್ತೊಂದೆಡೆ, 19,700 ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಕೆಲಸ ಮಾಡುವ 42,500 ಮಧ್ಯಾಹ್ನದ ಊಟದ ಕಾರ್ಮಿಕರ ಕನಿಷ್ಠ ಆದಾಯವನ್ನು ಹೆಚ್ಚಿಸುವ ಕ್ರಮವು ರಾಜ್ಯದ ಬೊಕ್ಕಸಕ್ಕೆ 64.25 ಕೋಟಿ ರೂಪಾಯಿಗಳ ಹೆಚ್ಚುವರಿ ವೆಚ್ಚಕ್ಕೆ ಕಾರಣವಾಗುತ್ತದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ರಾಜ್ಯಾದ್ಯಂತ ಕೆಲಸ ಮಾಡುವ ಎಲ್ಲಾ ಆಶಾ ಕಾರ್ಯಕರ್ತೆಯರು ಮತ್ತು ಮಧ್ಯಾಹ್ನದ ಊಟದ ಕಾರ್ಯಕರ್ತೆಯರು ಈಗ ಇತರ ಮಹಿಳಾ ಸರ್ಕಾರಿ ನೌಕರರ ಮಾದರಿಯಲ್ಲಿ ನಿಯಮಿತವಾಗಿ ಪೂರ್ಣ ಹೆರಿಗೆ ರಜೆಗೆ ಅರ್ಹರಾಗಿರುತ್ತಾರೆ ಎಂದು ಚನ್ನಿ ಘೋಷಿಸಿದ್ದಾರೆ.

ಎಲ್ಲಾ ಆಶಾ ಕಾರ್ಯಕರ್ತೆಯರು ಮತ್ತು ಮಧ್ಯಾಹ್ನದ ಊಟದ ಕಾರ್ಯಕರ್ತೆಯರು ಈಗ ಜನವರಿ 1, 2022 ರಿಂದ ಹೆಚ್ಚಿಸಿದ ನಿಗದಿತ ಭತ್ಯೆಯನ್ನು ಪಡೆಯುತ್ತಾರೆ. ಕಾರ್ಯಕರ್ತರು ಈ ಭತ್ಯೆಗಳನ್ನು 10 ತಿಂಗಳ ಬದಲು 12 ತಿಂಗಳವರೆಗೆ ಪಡೆಯುತ್ತಾರೆ ಎಂದು ಅವರು ಘೋಷಿಸಿದರು.

ರೋಪರ್ ಜಿಲ್ಲೆಯ ಚಮ್ಕೌರ್ ಸಾಹಿಬ್‌ನಲ್ಲಿ ವಿಶೇಷವಾಗಿ ಸಮಾವೇಶಗೊಂಡಿದ್ದ ಆಶಾ ಮತ್ತು ಮಧ್ಯಾಹ್ನದ ಊಟದ ಕಾರ್ಯಕರ್ತೆಯರನ್ನು ಒಳಗೊಂಡ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಚನ್ನಿ, ಈ ಭಗ್ಗೆ ಘೋಷಣೆ ಮಾಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...